ಗಜೇಂದ್ರಗಡ : (Apr_16_2026)
ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಎಸ್ ಎಫ್ ಐ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಜೋತೆಯಾಗಿ ಪ್ರತಿಭಟಿಸಿ ನಗರವು ದಿನದಿಂದ ದಿನಕ್ಕೆ ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಗರವಾಗಿದ್ದು ಸುತ್ತ ಮುತ್ತಲಿನ ಸುಮಾರು ಹಳ್ಳಿಗಳಿಂದ ಹಾಗೂ ನಗರ ಪ್ರದೇಶಗಳಿಂದ ಗಜೇಂದ್ರಗಡ ನಗರಕ್ಕೆ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ತಾಲೂಕಿನಾದ್ಯಂತ ಸುಮಾರು ೨೦೦೦ ಸಾವಿರ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ . ಪ್ರತಿ ವರ್ಷ ಸುಮಾರು ೧೦೦೦ ವಿದ್ಯಾರ್ಥಿಗಳು ಪದವಿ ಅಂತಿಮ ವರ್ಷ ಮುಗಿಸಿ ಉತ್ತರ್ಣರಾಗುತ್ತಾರೆ ಆದ್ದರಿಂದ ಎಮ್ ಎ, ಎಮ್ ಕಾಂ, ಎಮ್ ಎಸ್ಸಿ, ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ವಿಶ್ವನಾಥ ಹಾಗೂ ಕಂದಾಯ ನಿರೀಕ್ಷಕರಾದ ಶ್ರೀ ಪವಾಡಗೌಡ ಮಾಲಿಪಾಟೀಲ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಉನ್ನತ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ, ಮಾನ್ಯ ಉಪ ಕುಲಪತಿಗಳು ಧಾರವಾಡರವರಿಗೆ ಇವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ *ಎಸ್ ಎಫ್ ಐ ಜಿಲ್ಲಾಧ್ಯಕ್ಷರು ಚಂದ್ರು ರಾಠೋಡ* ಮಾತನಾಡಿ ಗಜೇಂದ್ರಗಡ ನಗರಕ್ಕೆ ಸುಮಾರು ನಾಲ್ಕು ತಾಲೂಕುಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ ಪದವಿ ನಂತರದ ಶಿಕ್ಷಣ ಸ್ನಾತಕೋತ್ತರ ಪದವಿ ಕೇಂದ್ರ ವಿದ್ಯಾಭ್ಯಾಸ ಮಾಡಲು ಗಜೇಂದ್ರಗಡದಲ್ಲಿ ಪದವಿ ಕೇಂದ್ರ ಇರುವುದಿಲ್ಲ ದೂರ ದೂರದ ಊರುಗಳಿಗೆ ಹೋಗಿ ಕೆಲವು ವಿದ್ಯಾರ್ಥಿಗಳು ಪಿಜಿ ಓದುತ್ತಿದ್ದಾರೆ ಇನ್ನೂ ಕೆಲವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಸರ್ಕಾರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಇದನ್ನು ಎಸ್ ಎಫ್ ಐ ಖಂಡಿಸುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
*ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ* ಮಾತನಾಡಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಆದರೆ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಗಜೇಂದ್ರಗಡ ತಾಲೂಕಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ತಮ್ಮ ಪದವಿ ಶಿಕ್ಷಣ ಮುಗಿಸಿ ಹೋರಹೊಗುತ್ತಿದ್ದಾರೆ ಆದರೆ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರ, ತಕ್ಷಣ ಇದರ ವರದಿ ತಯಾರಿಸಿ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಲು ಮುಂದಾಗಬೇಕೆಂದು ಸಾಂಕೇತಿಕ ಹೋರಾಟ ಮೂಲಕ ಎಸ್ ಎಫ್ ಐ ಸಂಘಟನೆ ಎಚ್ಚರಿಸುತ್ತದೆ ಎಂದು ಹೇಳಿದರು.
ನಂತರ ಹೋರಾಟದ ಸ್ಥಳಕ್ಕೆ ಮಾನ್ಯ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿದರು ಅನೀಲ್ ಆರ್ ಅವರು ಹೋರಾಟವನ್ನು ನಿರೂಪಿಸಿದರು, ಹೋರಾಟದಲ್ಲಿ ಚಂದ್ರು ರಾಠೋಡ, ಗಣೇಶ ರಾಠೋಡ, ಅನಿಲ್ ಆರ್, ವಿಶ್ವನಾಥ, ಪವಾಡಗೌಡ ಮಾಲಿಪಾಟೀಲ, ಗುರುಕಿರಣ್, ಶರಣು ಮಾಟರಂಗಿ, ಪ್ರಸನ್ನ ಮೂರ್ತಿ, ಗೌತಮ್, ಕೀರಣ್ ರಾಠೋಡ, ಲಕ್ಷ್ಮಿ ಕಬ್ಬರಿಗೆ, ಭೀಮವ್ವ ,ಕಾವ್ಯ, ಅಕ್ಷತಾ ,ಕಿರಣ್ ಪಮ್ಮಾರ್ ,ಪರಶುರಾಮ್ ಜಾದವ್, ವಿನಾಯಕ್ ರಾಥೋಡ್ ,ದ್ಯಾಮಣ್ಣ ತೆಂಗುಂಟಿ, ಮಂಜುನಾಥ್ ,ಹರೀಶ್ ,ಮಂಜುನಾಥ್ ,ಭಾಗ್ಯ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



Post a Comment