-->
Bookmark

Bagalakote : ಜಿಲ್ಲಾಸ್ಪತ್ರೆಲಿ ಭ್ರಷ್ಟಾಚಾರ ಆರೋಪ...? ಸಾರ್ವಜನಿಕರ ಜಣ ಲೂಟಿ...!

Bagalakote : ಜಿಲ್ಲಾಸ್ಪತ್ರೆಲಿ ಭ್ರಷ್ಟಾಚಾರ ಆರೋಪ...? ಸಾರ್ವಜನಿಕರ ಜಣ ಲೂಟಿ...!

ಬಾಗಲಕೋಟೆ : (May_15_2026) ಜಿಲ್ಲಾಸ್ಪತ್ರೆಯಲ್ಲಿ ಭೀಕರ ಭ್ರಷ್ಟಾಚಾರದ ಕರ್ಮಕಾಂಡ ಬಯಲು! ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಸಾಮಾನುಗಳು ಕಳ್ಳಸಂತೆಯಲ್ಲಿ ಮಾರಾಟವಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. Condemnation Items ಹೆಸರಿನಲ್ಲಿ ಹೊಸ ಪರಿಕರಗಳು, ಆಹಾರ ಸಾಮಗ್ರಿಗಳು ಮತ್ತು ಬಳಕೆಯ ವಸ್ತುಗಳನ್ನು ಹಗಲು ದರೋಡೆ ಮಾಡಿದ ಶಂಕೆ. ವರ್ಷಕ್ಕೆ ಎರಡು ಬಾರಿ ಸರಬರಾಜಾಗುವ ಸಾಮಾನುಗಳು ದಾಖಲೆಗಳಲ್ಲಿ ಮಾತ್ರ ಉಳಿದು, ನೆಲಮಾಳಿಗೆಯಿಂದ ನಾಪತ್ತೆಯಾಗುತ್ತಿವೆಯೇ ಎಂಬ ಅನುಮಾನ ಗಾಢವಾಗಿದೆ. ಡಿ-ಗ್ರೂಪ್ ಸಿಬ್ಬಂದಿ ಶಂಕ್ರಯ್ಯಾ ಸ್ಟಿಂಗ್ ಆಪರೇಷನ್‌ನಲ್ಲಿ ಬಾಯಿ ಬಿಟ್ಟ ಸತ್ಯಾಂಶ ಜನರನ್ನು ಬೆಚ್ಚಿಬೀಳಿಸಿದೆ. ದಿನಗೂಲಿ ನೌಕರರ ಮೂಲಕ ಮನೆ ಮನೆಗೆ ತೆರಳಿ ಸರ್ಕಾರಿ ಸಾಮಾನು ಮಾರಾಟದ ಜಾಲ ಸಕ್ರಿಯವಾಗಿದ್ದೇ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ. “ಮೇಲಧಿಕಾರಿ ಸುವರ್ಣಾ ಕುಲಕರ್ಣಿ ಆದೇಶದಂತೆ ಕೆಲಸ ಮಾಡುತ್ತಿದ್ದೆ” ಎಂಬ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ. ವರ್ಷಕ್ಕೆ ಸುಮಾರು ₹5 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಾನುಗಳು ಕಾಳುಸಂತೆಗೆ ಸಾಗಾಟವಾಗುತ್ತಿದ್ದವೆಂಬ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಧವೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ಇದೀಗ ಮತ್ತೊಂದು ಭ್ರಷ್ಟಾಚಾರದ ಪರ್ವತ ಕುಸಿದಿದೆ. ಇದು ಜಿಲ್ಲಾಸ್ಪತ್ರೆಯೇ...? ಅಥವಾ ಜನರ ಹಣ ದೋಚುವ ಅಡ್ಡೆಯೇ...? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಕಿರಾ ನ್ಯೂಸ್ ಕನ್ನಡ ಹಾಗೂ ಕ್ರಾಂತಿಸೂರ್ಯ ತಂಡ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶ ಬಹಿರಂಗವಾಗಿದೆ. ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಪೂರ್ಣ ನ್ಯಾಯಾಂಗ ತನಿಖೆ ನಡೆಸಬೇಕೆಂದು ಜನತೆ ಒತ್ತಾಯಿಸಿದ್ದಾರೆ. ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆ, ಭ್ರಷ್ಟರ ಹಣದ ಗೂಡಾಗಿದೆಯೇ? ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. 


ವರದಿ : 
ಕೃಷ್ಣ ರಾಠೋಡ್ 
ಸಂಪಾದಕರು 
ಕಿರಾ ನ್ಯೂಸ್ ಕನ್ನಡ. ಗಜೇಂದ್ರಗಡ
ಮೊ : 8197474996
Post a Comment

Post a Comment