-->
Bookmark

Gadag : ಕಳಸಾಪುರದ ಕಳಶ "ವಿಜಯ'ಲಕ್ಷ್ಮೀ ಓಲೇಕಾರ್ : ಗ್ರಾಮ ಸುಧಾರಣೆಗಾಗಿ ಜೀವನ‌ ಮುಡುಪಾಗಿಡುತ್ತಿರುವ ಛಲಗಾತಿ

Gadag : ಕಳಸಾಪುರದ ಕಳಶ "ವಿಜಯ'ಲಕ್ಷ್ಮೀ ಓಲೇಕಾರ್ : ಗ್ರಾಮ ಸುಧಾರಣೆಗಾಗಿ ಜೀವನ‌ ಮುಡುಪಾಗಿಡುತ್ತಿರುವ ಛಲಗಾತಿ 
ಬಯಲು ಸೀಮೆಯಲ್ಲಿ ಭಗವಧ್ಗೀಗೆ, ರಾಮಾಯಣ, ಮಹಾಭಾರತ ಕಲಿಸಿ, ಸಂಸ್ಕೃತಿ  ಪರಂಪರೆಗೆ ವಿಜಯಲಕ್ಷ್ಮೀ ಸಾಕ್ಷಿ 

ಗದಗ : ( Jun_17_2026)
ಕಳಸಾಪುರವು ಕರ್ನಾಟಕದ ಗದಗ ಜಿಲ್ಲೆಯ ಗದಗ ತಾಲೂಕಿನಲ್ಲಿರುವ ಒಂದು ಪ್ರಮುಖ ಗ್ರಾಮ. ಕಳಸಾಪುರ ಗ್ರಾಮದಲ್ಲಿ ಹನ್ನೆರಡನೆ ತರಗತಿಯಿಂದ ಟ್ಯೂಶನ್ ಹೇಳುತ್ತ ಜೀವನ ಕಟ್ಟಿಕೊಂಡ ಗಂಡೆದೆಯ ಛಲಗಾತಿ ವಿಜಯಲಕ್ಷ್ಮೀ ಓಲೇಕಾರ್. 

ತಂದೆ ಹನಮಂತಪ್ಪ ಮತ್ತು ತಾಯಿ ಬಸವಣ್ಣೆವ್ವ ದಂಪತಿಗೆ ಕೊನೆಯ ಮಗಳಾಗಿ 23ರ  ಮಾರ್ಚ್ 2001ರಲ್ಲಿ ಕಳಸಾಪುರದಲ್ಲಿ ಜನಿಸಿದ ವಿಜಯಲಕ್ಷ್ಮೀ ತಮ್ಮ ಕುಟುಂಬದಲ್ಲಿ ಮಾತಿನಮಲ್ಲಿ ಎಂದೆ ಫೇಮಸ್. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸುಧಾರಿಸಬೇಕೆಂಬ ಕನಸು ಕಂಡ ಇವರು ಕಳಸಾಪುರದ ಕಳಶ ವಿದ್ದಂತೆ. ಯಾಕೆ ಈ ಮಾತು ಅಂದ್ರೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ.‌ ಈ ಮಾತು ಇವರಿಗೆ ಅಕ್ಷರಶಃ ಅನ್ವಯವಾಗತ್ತೆ.‌ ಇವರು ತಮ್ಮ 18ನೇ ವಯಸ್ಸಿನಿಂದ ಮಕ್ಕಳಿಗೆ ಟ್ಯೂಶನ್ ಹೇಳುತ್ತ ಇಂದು ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಗಣಿತವನ್ನ ಹೇಳುತ್ತಾರೆ. ಕನ್ನಡ ಮಾಧ್ಯಮದಲ್ಲೇ ಓದಿದ ಇವರು, ಹಲವಾರು ಸಂಘ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಾರೆ. ಯೋಗಾಭ್ಯಾಸ, ಡ್ಯಾನ್ಸ್, ಹಾಡು, ಚಿತ್ರಕಲೆ, ಸಮಸ್ಯೆ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಕೂಡ ಮಾಡುತ್ತಾರೆ. ಮಹಿಳಾ ಸಬಲಿಕರಣದ ಬಗ್ಗೆ ಕನಸನ್ನ ಕಂಡವರು.‌ 

ಬಾಲ್ಯದಲ್ಲೇ ಬಡತನ ಕಂಡದ್ದರಿಂದ ಹಳ್ಳಿಗಳು ಸುಧಾರಣೆಯಾಗಬೇಕು ಎಂದು  ಶ್ರಮಿಸುತ್ತಿದ್ದಾರೆ. ವಾಲಕಳಸಾಪುರದ
ಮಾಜದವರಾದ ಇವರು ತಮ್ಮ‌ ಗ್ರಾಮದಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಸುಮಾರು 25 ಕ್ಕೂ ಹೆಚ್ಚು ಕಾರ್ಯಕ್ರಮದ ನಿರೂಪಣೆಯನ್ನೂ ಮಾಡಿದ್ದಾರೆ. ಕಪ್ಪತ್ತಗಿರಿ ಫೌಂಡೇಶನ್ ವತಿಯಿಂದ ವಿವಿಧ ಕಾರ್ಯಕ್ರಮವನ್ನ ಮಾಡಿ ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ 45 ದಿನಗಳ ಕಾಲ  ಉಚಿತವಾಗಿ ಯೋಗವನ್ನ ಕಲಿಸಿ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಭಾಷಣಕಾರರಾಗಿಯೂ, ಹಲವಾರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದಾರೆ


 ಒಟ್ಟಾರೆಯಾಗಿ ಗ್ರಾಮೀಣ ಮಹಿಳೆಯರು ತಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸ್ವಾವಲಂಬನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರವನ್ನು ಹೊಂದುವುದು. ಸ್ವಯಂ ಉದ್ಯೋಗಕ್ಕೂ ಹೆಚ್ಚಿನ ಒತ್ತು ನೀಡುವ ಇವರು ಒಂದೆಡೆಯಾದ್ರೆ, ಇವರ ಕುಟುಂಬದ ಹಿರಿಯರು ತಮ್ಮ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವನ್ನ ಕೊಟ್ಟ ಕೊಡುಗೈ ದಾನಿಯಾಗಿದ್ದಾರೆ. ಸಕಲ‌ ಕಲೆಯನ್ನ ಹೊಂದಿರುವ ಇವರು ತಮ್ಮ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎನ್ನುವ ಮಾತುಗಳು ಈಗ ಇತಿಹಾಸವಾಗಿದೆ. 

ಕರ್ನಾಟಕದ ಕರಾವಳಿ ಭಾಗದಲ್ಲಿರುವ ದೈವತ್ವವನ್ನ ಇವರು ಹೊಂದಿದ್ದಾರೆ. ಮಕ್ಕಳಿಗೆ ಭಗವದ್ಗೀತೆಯ ಮಂತ್ರ ಪಠಣ ಮಾಡಿಸುವ ಇರಾದೆಯನ್ನು ಹೊಂದಿದ್ದಾರೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನ ರಾಮಾಯಣ, ಮಹಾಭಾರತವನ್ನ ಮಕ್ಕಳಿಗೆ ತಿಳಿ ಹೇಳುವುದನ್ನ ಮಾಡುತ್ತಾರೆ. ತಮ್ಮ ಟ್ಯೂಶನ್ ಕ್ಲಾಸ್ ನಲ್ಲಿ single parent ಇರುವ ಇಬ್ಬರು ಮಕ್ಕಳಿಗೆ ಉಚಿತವಾಗಿ ಕಲಿಸುತ್ತಾರೆ. 

ಗ್ರಾಮದ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಜೊತೆಗೆ, ಮಹಿಳಾ ದಿನಾಚರಣೆ ಮಾಡಿ ದುಡಿಯುವ ಮಹಿಳೆಯರಿಗೆ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದಾರೆ. 

ಶಿಕ್ಷಣ ಕೆವಲ ಡಿಗ್ರಿಗಾಗಿ ಅಲ್ಲ. ಮಾರ್ಕ್ಸ್ ಪಡೆಯುವುದಲ್ಲ. ಶಿಕ್ಷಣ ಹಾಗೂ ಸ್ವಯಂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. 
ನಮ್ಮ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸದೃಢ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಮಾತನ್ನ ವಿಜಯಲಕ್ಷ್ಮೀ ಹೇಳುತ್ತಾರೆ. 

ಅದೇನೇ ಇರಲಿ ವಿಜಯಲಕ್ಷ್ಮೀ ಓಲೇಕಾರ್ ಇನ್ನಷ್ಟು ಮಗದಷ್ಟು ಸಮಾಜ ಸೇವೆ ಮಾಡಲಿ. ಹಳ್ಳಿಗಳೇ ಉದ್ಯೋಗ ಸೃಷ್ಟಿಸುವ ಕನಸಿಗೆ ರೆಕ್ಕೆಗಳಾಗಿ ಕನಸುಗಳೆಲ್ಲ ಈಡೇರಲಿ ಎಂಬುದೇ ನಮ್ಮ‌ನಿಮ್ಮೆಲ್ಲರ ಆಶಯ...
Post a Comment

Post a Comment