-->
Bookmark

Gajendragad : ಮದುವೆ ಶೃಂಗಾರಕ್ಕೆ ಅಂಜಲಿ ಕೈ ಚಳಕ : ಮೆಹಂದಿಯಲ್ಲಿ ಮತ್ತೊಂದು ಮೈಲಿಗಲ್ಲು

Gajendragad : ಮದುವೆ ಶೃಂಗಾರಕ್ಕೆ ಅಂಜಲಿ ಕೈ ಚಳಕ : ಮೆಹಂದಿಯಲ್ಲಿ ಮತ್ತೊಂದು ಮೈಲಿಗಲ್ಲು

ಗಜೇಂದ್ರಗಡ : (Jul_08_2026)
ಗ್ರಾಮೀಣ ಭಾಗದಲ್ಲಿ ಮಹಿಳೆಯರು ಯಾರ ಅಡಿಯಾಳಾಗದೇ ಸ್ವಾವಲಂಬಿ ಜೀವನ ನಡೆಸುವ ಕನಸು ಕಂಡ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರೀಮತಿ ಅಂಜಲಿ ರಾಯಬಾಗಿ.. ಅಂಜು, ಅಂಜಲಿ ಈ ಹೆಸರು ಗಜೇಂದ್ರಗಡದವ್ರಿಗೆ ಚಿರ ಪರಿತ. ಮೆಹಂದಿ ಹಾಕುವುದರಲ್ಲಿ ಇವ್ರು ಎತ್ತಿದ ಕೈ. ಮೆಹಂದಿ ಹಾಕುವ ಕಲೆಗೆ ಮತ್ತೊಂದು ‌ಮೈಲಿಗಲ್ಲೂ ಒದಗಿಸಿದ ಇವ್ರು. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದವ್ರು. ಬಡ ಕುಟುಂಬದಲ್ಲಿ  ಪ್ರಕಾಶ್ ಲದ್ವಾ ಮತ್ತು ರೇಣುಕಾ ಲದ್ವಾ ದಂಪತಿಗೆ ಎರಡನೇ ಮಗಳಾಗಿ 1994ರ ಜುಲೈ 21 ರಲ್ಲಿ ಜನಿಸಿದರು. 
ಪ್ರಾಥಮಿಕ ಶಿಕ್ಷಣ ಒಂದು, ಎರಡು ಮತ್ತು ಮೂರನೆ ತರಗತಿಯನ್ನ ಗಜೇಂದ್ರಗಡದಲ್ಲೆ ಮುಗಿಸಿದ ಇವರು ಯಲಬುರ್ಗಾ ಪಟ್ಟಣದಲ್ಲಿ ನಾಲ್ಕನೆ ತರಗತಿ ಯಿಂದ ಎಸ್ ಎಸ್ ಎಲ್ ಸಿ ವರೆಗೆ ಸರ್ಕಾರಿ ಶಾಲೆಯಲ್ಲಿ ಮತ್ತು ಪಿಯುಸಿಯನ್ನ ಸರ್ಕಾರಿ ಕಾಲೆಜಿನಲ್ಲಿ ಪೂರೈಸಿದರು. 
ಹುಟ್ಟಿನಿಂದ ಮನೆಯಲ್ಲಿ ಬಡತನ‌ ನೋಡಿದ್ದ ಶ್ರೀಮತಿ ಅಂಜಲಿ ರಾಯಬಾಗಿ ಟೈಲರಿಂಗ್ ಮಾಡಿಕೊಂಡು ಪಿಯುಸಿ ಮುಗಿಸಿದರು.‌ ಬಳಿಕ ಮೆಹಂದಿ ಹಾಕುವುದನ್ನ ಕಲಿತ ಶ್ರೀಮತಿ ಅಂಜಲಿ, ಮೆಹಂದಿ ಹಾಕುತ್ತ ಸ್ವಾವಲಂಬಿ ಜೀವನ‌ ನಡೆಸುತ್ತಿದ್ದಾರೆ. 

ಮನೆಯಲ್ಲಿ ಗಂಡ ಸುರೇಂದ್ರಸಾ ರಾಯಬಾಗಿ, ಗಂಡನ‌ ಅತ್ತೆ ಹುಲಿಗೆಮ್ಮ ರಾಯಬಾಗಿ ಮತ್ತು ಗಂಡನ ಕಾಕಾ ( ಚಿಕ್ಕಪ್ಪ ) ಅಂಬಾಸಾ ವಿ ರಾಯಬಾಗಿ ಸಹಕರಿಸುತ್ತಾರೆ. ಗಂಡ‌ ಸುರೇಂದ್ರಸಾ ರಾಯಬಾಗಿ ಚಿಕ್ಕವರಿದ್ದಾಗಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದಾಗ ಆಸರೆಯಾಗಿದ್ದು, ಗಂಡನ ಚಿಕ್ಕಪ್ಪ ಅಂಬಾಸಾ ರಾಯಬಾಗಿ ಮತ್ತು ಗಂಡನ ಅತ್ತೆ ಹುಲಿಗೆಮ್ಮ ರಾಯಬಾಗಿ ಎಂದು ಹೇಳಿದರು. 

ನನ್ನ ಕೆಲಸಕ್ಕೆ ಬಾಲ್ಯದಿಂದಲೇ ಎತಡನೇ ತಾಯಿಯಾಗಿ ಅಕ್ಕರೆಯಿಂದ ಸಲಹುವ ಬೆಂಬಲಿಸುವ ಅಕ್ಕ ಮಂಜುಳಾ ಮುರಳಿ ಹಬೀಬ್ ಬೆನ್ನೆಲುಬಾಗಿದ್ದಾರೆ. ಹೀಗೆ, ಎಲ್ಲರ ಬೆಂಬಲದಿಂದ ಕೆಲಸ ಮಾಡಲು‌ ಸಾಧ್ಯ ಎಂದು ಶ್ರೀಮತಿ ಅಂಜಲಿ ತಮ್ಮ ಅನಿಸಿಕೆ‌ ಹಂಚಿಕೊಂಡಿದ್ದಾರೆ. 

ಮೆಹಂದಿಯಲ್ಲಿ ಅತ್ತ್ಯುನ್ನತ ಮಟ್ಟಕ್ಕೆ ಹೋಗುವ ಇರಾದೆ ಇದೆ ಎಂದಿದ್ದಾರೆ. ಬಡತನ ಜೀವನ ನಡೆಸುವುದನ್ನ ಕಲಿಸುತ್ತದೆ.‌ ಕೆಲಸ ಮಾಡುವುದು ಸ್ವಾಭಿಮಾನದ‌ ಬದುಕು, ಸ್ವಾವಲಂಬನೆಯ ಬದುಕು ಸಾಗಿಸಲು. 
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಬಾಲ್ಯದಲ್ಲೆ ವಿವಾಹ ಮಾಡಿ ಕಳಿಸುತ್ತಾರೆ. ಜೀವನ ಏನು ಎಂಬುದು ಅರಿಯುವ ಮೊದಲೇ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಮೆಹಂದಿ ಹಾಕಲು, ಕೆಲಸ ಮಾಡಲು ಸಹಾಯ, ಸಹಕಾರಕ್ಕೆ ಎಲ್ಲರಿಗೂ ಯಾವತ್ತು ಚಿರರುಣಿ ಎಂದು ಅಪ್ಪ, ಅಮ್ಮ, ಅಕ್ಕ, ಸಹೋದರ  ಸಂಜಯ್ ಮತ್ತು ಗಂಡ, ಗಂಡನ ಅತ್ತೆ, ಮತ್ತು ಚಿಕ್ಕಪ್ಪ ಜೊತೆಗೆ ಸ್ನೇಹಿತ ಬಳಗವನ್ನ ನೆನೆದು ಕಣ್ತುಂಬಿಕೊಂಡರು. 

ಕಲೆಗೆ ಬೆಲೆ‌ಕೊಡುವವರು ಇದ್ದಾರೆ ಎನ್ನುತ್ತ ಬಾಲ್ಯದಲ್ಲಿ ತಾವು ರಚಿಸುತ್ತಿದ್ದ ಚಿತ್ರಕಲೆ ಎಲ್ಲರಿಗೂ ಇಷ್ಟವಾಗುತ್ತಿತ್ತು ಎಂದರು.‌ ಇನ್ನೂ, ಮೆಹಂದಿ‌ ಹಾಕುತ್ತ ರಾತ್ರಿ ಇಡಿ ಕಣ್ಣಲ್ಲಿ ನೀರು ಬಂದರೂ, ಕೆಲಸ ಮಾಡಿದ್ದೇನೆ‌ ಕಷ್ಟ ಅಂತಾ ಮಾಡಲ್ಲ. ಇದು ನನ್ನ ವೃತ್ತಿ ಎಂದು ತಮ್ಮ ವೃತ್ತಿಯಲ್ಲಿನ‌ ನಿಷ್ಟೆಯನ್ನ ತಿಳಿಸಿದರು. ನಾನು ರಾತ್ರೋ ರಾತ್ರಿ ಸ್ಟಾರ್ ಆಗಿದ್ದಲ್ಲ. ಬದಲಾಗಿ ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ ಎನ್ನುತ್ತ ಗದಗ ಜಿಲ್ಲೆಯಲ್ಲೇ ಅತ್ಯುತ್ತಮ ಮೆಹಂದಿ ಹಾಕುವುದು ಇವರೇ ಎಂದು ಶ್ರೀಮತಿ ಅಂಜಲಿ ರಾಯಬಾಗಿ ಅವರ ಸಹೋದರಿ ಶ್ರೀಮತಿ ಮಂಜುಳಾ ಮುರಳಿ ಹಬೀಬ್ ಹೇಳಿದರು. 
ಈ ಹಿಂದೆ ಮಹಿಳೆಯರು ಅಲಂಕಾರಕ್ಕಾಗಿ ವಿವಿಧ ಬಗೆಯ ಸಾಧನಗಳನ್ನ ಬಳಸುತ್ತಿದ್ದರು. ರಾಜ, ಮಹಾ ರಾಜರ ಕಾಲದಿಂದಲೂ ಅಲಂಕಾರಕ್ಕಾಗಿ ಮೆಹಂದಿಯನ್ನ ಬಳಸುತ್ತಾರೆ. ಈಗ ಗ್ರಾಮೀಣ ಭಾಗದಲ್ಲೂ ಮಹಿಳೆಯರು ಮದುವೆ, ಹುಟ್ಟುಹಬ್ಬ, ಎಂಗೇಜ್ಮೆಂಟ್, ಬಳೆ‌ ಉಡಿಸುವ, ಹಬ್ಬ ಹರಿದಿನಗಳಲ್ಲಿ ಮೆಹಂದಿ ಹಾಕಿಸುತ್ತಾರೆ. ಇದು ನನ್ನ ಸಾಧನೆಯಲ್ಲ. ಬದಲಾಗಿ ಯಾರು ಮೆಹಂದಿ ಹಾಕಲು ಕರಿಸುತ್ತಾರೋ ಅವರಿಗೆ ಈ ಶ್ರೇಯ ಸಲ್ಲುತ್ತದೆ ಎಂದು ತಮ್ಮ ಸಾಧನೆಯನ್ನ ಎಲ್ಲರಿಗೂ ಅರ್ಪಿಸಿದರು. 
ಈ ಮಧ್ಯೆ, ಕಲೆ ಯಾರ ಮನೆಯದ್ದಲ್ಲ. ಮೊದ ಮೊದಲು ಹಿಂದೇಟು ಹಾಕಿದವರೇ ಇಂದು, ನಮಗೆ ಸನ್ಮಾನಿಸಿದ ದಿನಗಳನ್ನು ಸಹ ನಾನು ನೋಡಿದ್ದೇನೆ ಎಂದಿದ್ದಾರೆ. ಕಳೆದ ವರ್ಷದಿಂದ ಮೆಹಂದಿ ಕ್ಲಾಸಸ್ ಕೂಡ ಆರಂಭಿಸಿದ್ದು, 12 ಜನರು ಕ್ಲಾಸ್ ಮುಗಿಸಿದ್ದು, ಕ್ಲಾಸಸ್ ಮುಗಿಸಿದ ಬಹುತೇಕ ಯುವತಿಯರು ಈಗ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸದಿಂದ ಹೇಳಿದರು. ಯಾರಾದರು ಕಷ್ಟ ಅಂತ ಬಂದ್ರೆ ಅವರಿಗೆ ಕೈಲಾದ ಸಹಾಯ ಮಾಡುತ್ತೇವೆ ಎನ್ನುತ್ತ ಪದೇ ಪದೇ ಕಷ್ಟದ ದಿನಗಳನ್ನ ನೆನೆದರು. ಶ್ರೀಮತಿ ಅಂಜಲಿ  ಅವರ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಲಿ...  ಗ್ರಾಮೀಣ ಭಾಗದಲ್ಲಿ
ಬಡ ಯುವತಿಯರಿಗೆ ದಾರಿ ದೀಪವಾಗಿರುವ ಶ್ರೀಮತಿ ಅಂಜಲಿ ರಾಯಬಾಗಿ ಅವರ ಸಾಧನೆಗೆ ನಮ್ಮದೊಂದು ಸಲಾಂ...!!

ಜಾಹಿರಾತು 
Post a Comment

Post a Comment