ಡಾ. ರಾಮಾಶಾಸ್ತ್ರೀ ಜೀ ಜೀರೆ ಹೆಸರು ಜಪಿಸುತ್ತಿರುವ ಮತದಾರ
ಜನರ ಆರೋಗ್ಯದೊಂದಿಗೆ ಕ್ಷೇತ್ರದ ಅಭಿವೃದ್ಧಿಯ ಕನಸು
ಜನ ಸಾಮಾನ್ಯರಿಂದ ಸರ್ವ ಸಮಾಜದೊಂದಿಗೂ ನಂಟು
ಸರಳತೆಗೆ ಮತ್ತೊಂದು ಹೆಸರೆ ಡಾ. ರಾಮಾಶಾಸ್ತ್ರೀ ಜೀ ಜೀರೆ
ಗಜೇಂದ್ರಗಡ : (Oct_12_2026)
ರೋಣ ಬಿಜೆಪಿಯಲ್ಲಿ ಈ ಬಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಧ್ಯ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನೋಡಿದ ಮುಖಗಳೆ ಹೆಚ್ಚು. ಜನರು ಸಹ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ನ ಹಿರಿಯರು ಸಧ್ಯ ಸಭಾಪತಿಯಾಗಿರುವ ಜಿ.ಎಸ್ ಪಾಟೀಲ್ ಅವರು ಕಳೆದ ಚುನಾವಣೆಯಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು. ಹೀಗಾಗಿ 2028 ರ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನಲಾಗುತ್ತಿದೆ.
ಈಗ ಬಿಜೆಪಿಯದ್ದು ಮಾತನಾಡುವುದಾದ್ರೆ, ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಬೇಕಾದ ಪ್ರತಿಪಕ್ಷವಾಗಬೇಕಿದ್ದ ಕಮಲ ಪಾಳಯದಲ್ಲಿ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ದಿನ ಬೆಳಗಾದರೇ ಯಾವುದಾದರೊಂದು ಸಮಸ್ಯೆ ಮುಂದಿಟ್ಟುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಜನರೊಂದಿಗೆ ಬೆರೆಯುತ್ತಿದ್ದೇವೆ. ಪ್ರತಿ ಮತದಾರರ ಸಮಸ್ಯೆಗಳನ್ನ ಆಲಿಸುತ್ತಿದ್ದೇವೆ ಎಂದು ಅಭಯ ಹಸ್ತ ನೀಡುವ ಕೆಲಸ ಮಾಡಿತ್ತು. ಚುನಾವಣೆ ಇನ್ನೂ ದೂರ ಇರುವಾಗ ಈಗಲೇ ಯಾವ ನಿರ್ಧಾರ ಮಾಡಲಾಗದು ಎಂಬುದು ಸತ್ಯವಾದ್ರೂ, ಭಾರತದಲ್ಲಿ ವರ್ಷವಿಡಿ ಸಾಲುಸಾಲು ಚುನಾವಣೆಗಳು ನಡೆಯುತ್ವೆ. ಪ್ರತಿ ಚುನಾವಣೆಯೂ ಒಂದಿಲ್ಲೊಂದು ರಾಜಕೀಯ ವ್ಯಕ್ತಿಗಳ ಮೇಲೆ ರಾಜಕೀಯ ಪಕ್ಷಗಳ ಮೇಲೆ ಪ್ರಭಾವ ಬೀರತ್ವೆ. ಆದ್ರೆ, ಈಗ ಪ್ರತಿ ಪಕ್ಷ ಬಿಜೆಪಿಯ ಧುರೀಣ ನಾಯಕ ಮಾಜಿ ಸಚಿವರು ಸ್ವ ಕ್ಷೇತ್ರದಲ್ಲಿ ಸುಮ್ಮನೆ ಕೈಕಟ್ಟಿ ಕುಳಿತಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಇತ್ತ, ಎರಡನೇ ಹಂತದ ನಾಯಕರು ಸಹ ಅಷ್ಟಕಷ್ಟೆ ಎಂಬಂತಿದ್ದಾರೆ. ಬಿಜೆಪಿಯಲ್ಲಿ ಪರಮ ನಾಯಕರು ಬಿಟ್ಟರೆ ಉಳಿದ ನಾಯಕರು ಗಪ್ ಚುಪ್. ಮೇಲ್ಮಟ್ಟದ ನಾಯಕರು ಬೀದಿಗಿಳಿದರೇ ಅವರ ಹಿಂದೆ ಓಡಾಡುತ್ತಾರೆ. ಹೊರತು, ಜನರ ಸಮಸ್ಯೆಗಳನ್ನ ಜನರೆ ಬಗೆಹರಿಸಿಕೊಳ್ಳಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಭೀಕರ ಬರಗಾಲ ಎದುರಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೂ ತೊಂದರೆಯಾಗಲಿದೆ. ರಸ್ತೆಗಳು ಹಾಳಾಗಿವೆ. ಮೂಲ ಸೌಕರ್ಯಕ್ಕೂ ತೊಂದರೆ ಅನುಭವಿಸುವಂತಾಗಿದೆ. ಕರೆಂಟ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಅಧಿಕಾರಿಗಳು ಸ್ಥಳೀಯವಾಗಿ ಸಿಗುತ್ತಿಲ್ಲ. ಹಲವು ಕಚೇರಿಗಳು ಅರ್ಧಮರ್ಧ ಇವೆ. ಕೆಲವು ಕಚೇರಿಗಳಲ್ಲಿ ಖಾಯಂ ಅಧಿಕಾರಿಗಳೆ ಇಲ್ಲ. ಇನ್ನೂ ಹಳ್ಳಿಗಳಲ್ಲಂತು. ಕೇಳುವವರೆ ಇಲ್ಲದಂತಾಗಿದೆ. ಪಿಡಿಓಗಳೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪಟ್ಟಣ ಪಂಚಾಯತಿಯಲ್ಲೂ ಮುಖ್ಯಾಧಿಕಾರಿಗಳು ಹೇಳಿದ್ದೆ ವೇದವಾಕ್ಯದಂತಾಗಿದೆ. ಜನರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗೆ ಕ್ಷೇತ್ರದಲ್ಲಿನ ಸಮಸ್ಯೆಗಳನ್ನ ಹೇಳುತ್ತಾ ಹೋದರೇ ಸಮಯ ಸಾಕಾಗದು. ಹೀಗಿರುವಾಗ ಪ್ರತಿಪಕ್ಷ ಬಿಜೆಪಿ ಪಂಪರು ನಿದ್ರೆಗೆ ಜಾರಿಲ್ಲ. ಬದಲಾಗಿ ಗಾಢನಿದ್ರೆ ಮಾಡುತ್ತಿದೆ. ಇದೆಲ್ಲವನ್ನ ನೋಡಿದ್ರೆ, ಮಾಜಿ ಸಚಿವರು ಉತ್ಸಾಹವನ್ನ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಜನರಿಗೆ 5 ಗ್ಯಾರಂಟಿಯನ್ನ ಕೊಟ್ಟಿದ್ದನ್ನೆ ಜಪಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿದೆ. ಅಭಿವೃದ್ಧಿ ಬಗ್ಗೆ ಮಾತನಾಡಿದರೇ, ಅವರ ಸರ್ಕಾರ ಬಂದಾಗ ಕ್ಷೇತ್ರದ ಜನ ಪ್ರಶ್ನೆ ಕೇಳುತ್ತಾರೆ ಎಂಬ ಹಿಂಜರಿಕೆಯೂ ಇರಬಹುದು. ಈಗ ಕಾಂಗ್ರೆಸ್ ನ ಜಿ.ಎಸ್ ಪಾಟೀಲ್, ಮತ್ತು ಬಿಜೆಪಿಯ ಕಳಕಪ್ಪ ಬಂಡಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ 2028ರ ಚುನಾವಣೆಯಲ್ಲಿ ಬಹುತೇಕ ಎರಡು ಪಕ್ಷದ ಕಾರ್ಯಕರ್ತರು, ಹಲವು ಮುಖಂಡರು, ಮತದಾರರು ಬದಲಾವಣೆ ಬಯಸುವುದು ಸಹಜ. ಈಗ ಬದಲಾವಣೆಯಾದ್ರೆ, ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಬಂದಾಗ ಹಲವು ಮುಖಗಳು ಇವೆ. ಬಿಜೆಪಿಯಿಂದ ಸಾಲು ಸಾಲು ನಾಯಕರು ಇದ್ದಾರೆ. ರೆಬಲ್ ಮಾಯಕರೇ ಬೇಕು. ಮಾತನ್ನ ಕೇಳುವಂತವರಾಗಬೇಕು. ಇಲ್ಲದಿದ್ದರೇ, ಈ ಉಭಯ ನಾಯಕರ ಒತ್ತಡ ಅವರನ್ನ ಕಟ್ಟಿಹಾಕುವ ಸಾಧ್ಯತೆಯೂ ಹೆಚ್ಚಿದೆ. ಇದೆಲ್ಲ ದೃಷ್ಟಿಯಿಂದ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿರುವ ಹೆಸರು ಡಾ. ರಾಮಾಶಾಸ್ತ್ರೀ ಜೀ ಜೀರೆ ಅವರದ್ದು. ಬಡವರ ಡಾಕ್ಟರ್ ಎಂದೆ ಕರೆಯುವ ಡಾ. ಜೀರೆಯವರು. ಸಮಾಜ ಸೇವೆ ಮಾಡುತ್ತಾ ಕ್ಷೇತ್ರದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. ಎಲ್ಲ ಸಮಾಜದೊಂದಿಗೂ ಉತ್ತ ಬಾಂಧವ್ಯ ಹೊಂದಿದ್ದಾರೆ. ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಬ್ರಾಹ್ಮಣ ಸಮಾಜವನ್ನ ಪ್ರತಿನಿಧಿಸಿದ್ರು. ಅವರೂ ಎಲ್ಲರೊಂದಿಗೂ ಒಡನಾಟವನ್ನ ಹೊಂದಿದ್ದಾರೆ. ಕ್ಷೇತ್ರದಲ್ಲಿ ಜನರಿಗೆ ಬೇಕಾದ ವ್ಯಕ್ತಿಯಾಗಿದ್ದಾರೆ ಡಾ. ಜೀರೆ. ರಾಜಕೀಯಕ್ಕೆ ಬಂದು ಸಮಾಜ ಸೇವೆ ಮಾಡುವ ತುಡಿತ ಕೂಡ ಅವರಲ್ಲಿದೆ. ಡಾ. ರಾಮಾಶಾಸ್ತ್ರೀ ಜೀರೆ ಅಭ್ಯರ್ಥಿಯಾದ್ರೆ, ಎಲ್ಲರೂ ಅವರೊಂದಿಗೆ ಕೈಕಟ್ಟಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ಆರ್.ಎಸ್.ಎಸ್ ನೊಂದಿಗೂ ನಂಟು ಹೊಂದಿರುವ ಅವರು 1980ರ ದಶಕದಿಂದಲೂ ಆರ್.ಎಸ್ ಎಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಸರಳ ಸಾಧಾರಣ ಜೀವನ ಶೈಲಿ. ಜನರ ಸಮಸ್ಯೆಗೆ ಸ್ಪಂದಿಸುವ ಗುಣ. 5 ರೂಪಾಯಿ ಡಾಕ್ಟರ್ ಅಂತಾನೆ ಕರೆಯಲ್ಪಡುವ ಡಾ. ರಾಮಾಶಾಸ್ತ್ರೀ ಜೀ ಜೀರೆ ಮತ್ತು ಸಹೋದರ, ಸೊಸೆಯೂ ಅವರಿಗೆ ವೈದ್ಯಕೀಯ ವೃತ್ತಿ ಮಾಡುತ್ತಾ ಇವರಿಗೆ ಬೆನ್ನೆಲುಬಾಗಿದ್ದಾರೆ. ಡಾ. ಶಾಸ್ತ್ರೀ ಅವರು ರಾಜಕೀಯಕ್ಕೆ ಬಂದರೇ, ರೋಗಿಗಳನ್ನ ಗುಣಮುಖರನ್ನಾಗಿ ಮಾಡುತ್ತಾ, ಕ್ಷೇತ್ರದ ಅಭಿವೃದ್ಧಿ ಮಾಡೇ ಮಾಡುತ್ತಾರೆ ಎಂಬ ನಂಬಿಕೆ ಕ್ಷೇತ್ರದ ಮತದಾರರದ್ದು...!
ಕೃಷ್ಣ ರಾಠೋಡ್
ಸಂಪಾದಕರು
ಕಿರಾ ನ್ಯೂಸ್ ಕನ್ನಡ
ಗಜೇಂದ್ರಗಡ
ಮೊ : 8197474996



Post a Comment