ಲಾಡಜಿ ಮುಲ್ಲಾ ವಿದೇಶ ಪ್ರವಾಸಕ್ಕೆ ಶುಭ ಹಾರೈಕೆ
ವಿಜಯಪು :(Jan_23_2026)
ಜಿಲ್ಲೆಯ ಬಬಲೇಶ್ವರದ ಸುತಗುಂಡಿಯ "ಕಿಸಾನ್ ಹೈಟೆಕ್ ನರ್ಸರಿ" ಮೂಲಕ ಜನಮನ ಗೆದ್ದ ಉಮರ್ ಮುಲ್ಲಾ ಮತ್ತು ಲಾಡಜಿ ಮುಲ್ಲಾ ಸಹೋದರರು ತಮ್ಮ ಉದ್ಯಮವನ್ನ ವಿದೇಶಕ್ಕೂ ಪರಿಚಯಿಸುತ್ತಿದ್ದಾರೆ. ಈ ಮೂಲಕ ಅವರು ಸ್ಥಳೀಯವಾಗಿದ್ದ ನರ್ಸರಿ ಮತ್ತು ನೈಸಕರ್ಗಿಕ ಬೆಲ್ಲದ ಪರಿಮಳ ವಿದೇಶದಲ್ಲೂ ಘಂ ಎನ್ನಲಿದೆ. ಹೀಗಾಗಿ, ಇದೇ ಜನವರಿ 24 ರಿಂದ ಫೆಬ್ರವರಿ 3 ರ ವರೆಗೆ ಯುಎಇಗೆ ಪ್ರಯಾಣ ಬೆಳೆಸಲಿ, ಅಲ್ಲಿ ನಡೆಯುವ ಉದ್ಯಮಿಗಳೊಂದಿಗೆ ಸಭೆ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ರೈತರೊಂದಿಗೂ ಸಂವಾದ ಮಡಿಸಲಿದ್ದಾರೆ. ಕರ್ನಾಟಕದಲ್ಲಿ ಸ್ಥಳೀಯವಾಗಿ ಪರಿಚಯವಾದ ಕಿಸಾನ್ ಹೈಟೆಕ್ ನರ್ಸರಿ ಈಗ ವಿದೇಶದಲ್ಲೂ ಕಮಾಲ್ ಮಾಡಲಿದೆ. ಇದು ವಿಜಯಪುರ ಜಿಲ್ಲೆಯ ರೈತರಿಗೆ ಮತ್ತು ರಾಜ್ಯೆ ರೈತರು ಸಂತಸ ಪಡುವ ವಿಷಯವಾಗಿದೆ. ಹೀಗಾಗಿ, ಲಾಡಜಿ ಮುಲ್ಲಾ ಅವರಿಗೆ ವಿದೇಶ ಪ್ರವಾಸಕ್ಕೆ ರಾಜ್ಯದ ವಿವಿಧ ರೈತರು ಮತ್ತು ಲಾಡಜಿ ಕುಟುಂಬ ಹಾಗೂ ಕಿಸಾನ್ ಹೈಟೆಕ್ ನರ್ಸರಿವತಿಯಿಂದ ಶುಭ ಕೋರಲಾಗಿದೆ. ವಿದೇಶ ಪ್ರವಾಸ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.



Post a Comment