-->
Bookmark

Gadag : ಮತ್ತೊಮ್ಮೆ‌ ಸಾಬೀತಾದ ದೈವ ಮಹಾತ್ಮೆ...!!!ಧರ್ಮಕ್ಕೆ ಸಂದ ಜಯ...!!

Gadag : ಮತ್ತೊಮ್ಮೆ‌ ಸಾಬೀತಾದ ದೈವ ಮಹಾತ್ಮೆ...!!!

ಧರ್ಮಕ್ಕೆ ಸಂದ ಜಯ...!!

ಗದಗ : ( Aug_04_2026)
ವಿಶ್ವ ಪ್ರಸಿದ್ಧ ಗದಗ ಜಿಲ್ಲೆ ಶ್ರೀ ಮೌನೇಶ್ವರ ಸ್ವಾಮಿಯ ವೀರುಪಾಕ್ಷಸ್ವಾಮಿ ಮಠ ದೋಷ ಮುಕ್ತವಾಗಿದೆ. ಶ್ರೀ ಮೌನೇಶ್ವರ ಸ್ವಾಮಿಯ ಮಠದ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ರು. ಸೂಕ್ತ ಸಮಯಕ್ಕೆ ಕಾಯ್ತಾ ಕುಳಿತಿದ್ದ ಚಂದ್ರಕಾಂತ್ ಸದಾಶಿವ ಸೋನಾರ್ ಇವರು 2018 ರಲ್ಲಿ ಕೋರ್ಟ್ ಮೆಟ್ಟಲೇರಿದ್ರು. ಅಧ್ಯಕ್ಷ ಸ್ಥಾನವನ್ನ ಬಿಟ್ಟು ಕೊಡಬೇಕು. ಈ ಕಮಿಟಿಯನ್ನ ವಜಾಗೊಳಿಸಬೇಕೆಂದು ಮಠದ ವಿರುದ್ಧ ಹೋದ್ರು. ಇದೆ ನೋವಿನಲ್ಲೆ ಹಿರಿಯ ಸ್ವಾಮಿಗಳು ಇಹಲೋಕ ತ್ಯಜಿಸಿದ್ರು. ಅವರ ಮಕ್ಕಳು ಕೆಲ ಸಮಯ ಮಠದ ಚಿಂತೆಯಲ್ಲೆ ಬೆಯುತ್ತಿರುವಾಗ 2026 ರಲ್ಲಿ ತೀರ್ಪು ಬಂದಿದ್ದು, ಅದು ಮಠದ ಪರವಾಗಿ ಆಗಿದೆ. 
ಕಾನೂನು ಸಮರದಲ್ಲಿ ಮಠಕ್ಕೆ ಜಯವಾಗಿದ್ದು, ಮಠದ ಆವರಣದಲ್ಲಿಗ ಭಕ್ತರ ಸಂತಸಕ್ಕೆ ಪಾರವೆ ಇಲ್ಲದಂತಾಗಿದೆ. ಸಧ್ಯ ಮಠದ ಪೀಠಾಧಿಪತಿಗಳು ಮತ್ತು ಭಕ್ತ ವೃಂದ ಮಠದ ಜಯವನ್ನ ಸಂಭ್ರಮಿಸುತ್ತಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ವರವಿ ಗ್ರಾಮದಲ್ಲಿರುವ ಸುಕ್ಷೇತ್ರ ವರವಿಯಲ್ಲಿ ಸರ್ವ ಧರ್ಮಿಯರ ಗುರುವಾಗಿರುವಂತಹ ಶ್ರೀ ಮೌನೇಶ್ವರರು ಭಕ್ತರ ಇಷ್ಟಾರ್ಥ ಈಡೇರಿಸುತ್ತ ವರಗುರುವಾಗಿ ಈ ಭಾಗದ ಕಲ್ಪವೃಕ್ಷ ಕಾಮಧೇನುವಾಗಿದ್ದಾರೆ.  

 ಪರಿಚಯ : ಹಿಂದೊಮ್ಮೆ ಮೌನೇಶ್ವರ ಸ್ವಾಮಿಯೊಂದಿಗೆ ಇಡಿ ಶಿಷ್ಯ ಸಮೂಹ ಜಯಘೋಷ ಮಾಡುತ್ತ ಜತೆಗಿರುತ್ತಿತ್ತು. ಒಂದು ದಿನ ಆ ಹಳ್ಳಿಯ ಹೊರವಲಯದಲ್ಲಿದ್ದ ಒಂದು ಗೂಟಗಲ್ಲಿಗೆ ಬಲಗಾಲು ತಾಕಿ ಮೌನೇಶ್ವರರು ಅಲ್ಲಿಯೇ ಸ್ವಲ್ಪು ವಿಶ್ರಮಿಸಲು, ಸರ್ವಾಂತರ್ಯಾಮಿಯಾದ ನೀನೆ ಹೀಗೆ ಕಲ್ಲೆಡವಬೇಕೆ ? ಇದರ ಹಿನ್ನೆಲೆ ಏನು ಎಂದು ಶಿಷ್ಯರು ವಿಚಾರಿಸಿದಾಗ. ಮುಂದೊಂದು ದಿನ ಈ ಗ್ರಾಮವು ಸರ್ವಶ್ರೇಷ್ಠ ಕ್ಷೇತ್ರವೆಂಬ ಕೀರ್ತಿ ಪಡೆಯುತ್ತದೆ. ನಾನೀಗ ಎಡವಿದ ಕಲ್ಲು ಸ್ವಯಂ ಉದ್ಭವ ಶಿವಲಿಂಗ. ನನ್ನ ಸರ್ವಶಕ್ತಿಯನ್ನೆಲ್ಲ ಈ ಶಿವಲಿಂಗದಲ್ಲಿ ಸಮಾವೇಶಗೊಳಿಸಿದ್ದೇನೆ ಎಂದರು.
ವರವಿಯ ಭಕ್ತರು ಆ ಶಿವಲಿಂಗವನ್ನು ಕಟ್ಟಡವಿಲ್ಲದೇ ಬರಿ ಬಯಲಲ್ಲೇ ಪೂಜಿಸಲಾರಂಭಿಸಿದರು.ಆ ಶಿವಲಿಂಗಕ್ಕೊಂದು ಮಂದಿರವಾಗಬೇಕೆಂದು ಮನದಲ್ಲಿ ಯೋಚಿಸಿ ವಿಜಯಪುರದ ಬಾದಶಹನ ಸ್ವಪ್ನದಲ್ಲಿ ಪ್ರಕಟನಾಗಿ ಮಂದಿರ ಬಯಲಲ್ಲಿ ನಿಂತಿದೆ. ಅದಕ್ಕೊಂದು ಕಟ್ಟಡ ನಿರ್ಮಿಸಬೇಕೆಂದು ಆಜ್ಞಾಪಿಸುತ್ತಾನೆ. ಆಗ ಬಾದಶಾಹನ ದೂತರು ಮಂದಿರ ನಿರ್ಮಿಸುತ್ತಾರೆ. ಅದೇ ಮೌನೇಶ್ವರ ಮಠ ಎಂದು ಪ್ರಸಿದ್ಧವಾಯಿತು.

 *ಫಕೀರ - ಪರಮತ್ಮ :* ಮೌನೇಶ್ವರರು ವಿಜಯಪುರದಲ್ಲಿ ಆಳ್ವಿಕೆ ಮಾಡುತ್ತಿದ್ದ ಆದಿಲ್‌ಶಾಹಿ ಆಸ್ಥಾನಕ್ಕೆ ಬಂದು ಪವಾಡ ಮೆರೆಯುವ ಮೂಲಕ ರಾಜರಾದಿಯಾಗಿ ಆಸ್ಥಾನಿಕರಿಂದ ಫಕೀರನಾಗಿ ಪೂಜೆಗೂಳ್ಳುತ್ತಾರೆ. ಇಂದಿಗೂ ಅವರು ಉಭಯ ಜನಾಂಗಕ್ಕೂ ಫಕೀರನಾಗಿ ಮತ್ತು ಪರಮತ್ಮನಾಗಿ ಪೂಜೆಗೂಳ್ಳುತ್ತಿದ್ದಾರೆ.

ಸುರಪುರದ ನಾಯಕರು ಮೌನೇಶ್ವರರ ಆಶೀರ್ವಾದದಿಂದ ದೊರೆಗಳಾದರೆಂದು ಪ್ರತೀತಿ. ಈ ಮನೆತನದ ಪಾಮನಾಯಕನ ಮಂತ್ರಿಯಾಗಿದ್ದ ನಿಶತಿ ವೀರಪ್ಪನ್ನು ಗೋನಾಳ ಮತ್ತು ತಿಂಥಣಿ ದೇವಸ್ಥಾನ ಕಟ್ಟಿಸುತ್ತಾನೆ. ಆದಿಲ್‌ಶಾಹಿಯ ಸುಭೇದಾರನಾಗಿ ಲಕ್ಷ್ಮೇಶ್ವರದಲ್ಲಿ ಆಳ್ವಿಕೆ ಮಾಡುತ್ತಿದ್ದ ಅಂಕುಶಖಾನ ಕಾಲದಲ್ಲಿ ಈ ಭಾಗದಲ್ಲಿ ಮೌನೇಶ್ವರರ ಪ್ರಭಾವ ಹೆಚ್ಚಿತ್ತು. ಅನಂತರ ವರವಿಯಲ್ಲೂ ದೇವಾಲಯ ನಿರ್ಮಾಣವಾಗುತ್ತದೆ. ವರವಿಯಲ್ಲಿ ಶಿವಲಿಂಗ ಪೋಜೆಗೋಳ್ಳುತ್ತಿದೆ. ಮೋಹರಂ ಹಬ್ಬವನ್ನು ದೇವಾಲಯದಲ್ಲಿ ಆಚರಿಸುತ್ತಾರೆ. ಅಂದಿನ ನೆನಪಿನ ಅಂಗವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜಾತ್ರೆ ನಡೆಯುತ್ತದೆ.
Post a Comment

Post a Comment