-->
Bookmark

August : ಜಿ.ಎಸ್ ಪಾಟೀಲ್ ಸಭಾಪತಿ ಹೆಚ್ಚಾದ ನಿರೀಕ್ಷೆ...!

August : ಜಿ.ಎಸ್ ಪಾಟೀಲ್ ಸಭಾಪತಿ 
ಹೆಚ್ಚಾದ ನಿರೀಕ್ಷೆ...!
ರೋಣ ವಿಧಾನಸಭಾ ಕ್ಷೇತ್ರದ ಮುಂದಿನ ನಾಯಕ...?

ಗಜೇಂದ್ರಗಡ :(Aug_04_2026)

ರೋಣ ಮತ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಾಗಿದೆ.‌ ಸಚಿವರಾಗಬೇಕಿದ್ದ ಜಿ.ಎಸ್ ಪಾಟೀಲ್ ಅವರು, ಈಗ ಅದಕ್ಕೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ.‌ ಕಾಂಗ್ರೆಸ್ ಅತ್ಯಂತ ಹಿರಿಯರಾದ ಜಿ.ಎಸ್ ಪಾಟೀಲ್ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಗದಗ ಜಿಲ್ಲೆಯಲ್ಲೆ ಹಿಂದುಳಿದ ತಾಲೂಕಿನಲ್ಲಿ ರೋಣ ಕೂಡ ಹೌದು.‌ ಬಿಜೆಪಿ ಯ ಕಳಕಪ್ಪ ಬಂಡಿ ಅವರು ಸಚಿವರಾದಾಗ ಹಲವಾರು ಶಾಲಾ ಕಾಲೇಜುಗಳನ್ನ ಕ್ಷೇತ್ರಕ್ಕೆ ತಂದರು.‌ ರಸ್ತೆಗಳು ಅಭಿವೃದ್ಧಿ ಯಾದ್ವು. ಮುಖ್ಯವಾಗಿ ಗಜೇಂದ್ರಗಡ ಪಟ್ಟಣ ಬೆಳೆಯುವಲ್ಲಿ ಪ್ರಮುಖರಾದ್ರು. ಆದ್ರೆ, ಅವರ ಹಿಂದೆ ಕಾಣದ‌ಕೈಗಳಂತೆ ಕೆಲಸ ಮಾಡಿದ್ದು ಸಿದ್ದಣ್ಣ ಬಂಡಿ ಅಂತಾ ಕೂಡ ಕ್ಷೇತ್ರದ ಜನ ಗುನುಗುತ್ತಾರೆ. ಈಗ ಶಾಸಕರಾದ ಜಿ.ಎಸ್ ಪಾಟೀಲ್ ಅವರು ಸಭಾಪತಿಯಾಗುತ್ತಿರುವುದು ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಹೇಳ್ತಿದಾರೆ. ತಮ್ಮ ಪ್ರಭಾವ ಬಳಸಿ ಹೆಚ್ಚಿನ ಅನುದಾನ ತರುತ್ತಾರೆ ಎನ್ನುತ್ತಾರೆ. 

ಆದ್ರೆ, ಈಗ ಕಾಂಗ್ರೆಸ್ ಮುಖಂಡರಾದ ಸಿದ್ದಪ್ಪ ಬಂಡಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.‌ ಗಜೇಂದ್ರಗಡ ಪಟ್ಟಣವನ್ನ ಬಿಜೆಪಿಯಿಂದ ಕಿತ್ತುಕೊಂಡು ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಈಗ, ಶಾಸಕರಷ್ಟೆ ಪ್ರಭಾವವನ್ನ ಹೊಂದಿರುವ ಇವರು ರೋಣ ತಾಲೂಕಿನ ಅಭಿವೃದ್ಧಿಯ ಹೊಣೆ ಹೊತ್ತಿದ್ದಾರೆ ಎನ್ನಲಾಗುತ್ತಿದೆ.‌

ಜಿ.ಎಸ್ ಪಾಟೀಲ್ ಅವರಿಗೆ ಇದು ಕೊನೆಯ ಅವಕಾಶವಾಗಿದ್ದು, ಕ್ಷೇತ್ರದಲ್ಲಿ ತಮ್ಮ ಪ್ರಭಾವ ಕಳೆದುಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ಜಿ.ಎಸ್ ಪಾಟೀಲ್ ಅವರು ಸಿದ್ದರಾಮಯ್ಯ ಅವರಂತೆ active politics ನಿಂದ ದೂರ ಇರಬಹುದು. ಜಿ.ಎಸ್. ಪಾಟೀಲ್ ಅವರ ಪುತ್ರ ಮಿಥುನ್ ಪಾಟೀಲ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಬಹುದು. ಈಗ ನಡೆಯುತ್ತಿರುವುದು ಪಕ್ಕಾ ಹಾವು ಏಣಿ ಆಟ. ಜಿ.ಎಸ್ ಪಾಟೀಲ್ ಅವರ ನಂತರ ಕ್ಷೇತ್ರದಲ್ಲಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಈಗ ಕಷ್ಟಸಾಧ್ಯ. ಈಗ ಕೇವಲ ರೋಣ ಮತ ಕ್ಷೇತ್ರಕ್ಕೆ ಮಾತ್ರವಲ್ಲ. ಗದಗ ಜಿಲ್ಲೆಯ ಜನರು ಜಿ.ಎಸ್. ಪಾಟೀಲ್ ಅವರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. 

ಗದಗ ಜಿಲ್ಲೆಯ ಮತ್ತೊಬ್ಬ ರಾಜಕಾರಣಿ ಕಾಂಗ್ರೆಸ್ ಸರ್ಕಾರದಲ್ಲಿ ಇವರೆಗೂ ಸಚಿವರಾಗಿ ರಾರಾಜಿಸಿದ ಹೆಚ್.ಕೆ ಪಾಟೀಲ್ ಅವರ ನಡೆ ಕೂಡ ನಿಗೂಢವಾಗಿದೆ. ಹೆಚ್.ಕೆ ಪಕ್ಕಾ ಕಾಂಗ್ರೆಸ್ಸಿಗರು. ಅವರು ಯಾವ ರಣ ತಂತ್ರ ಹೆಣೆಯುತ್ತಾರೆ. ಆ ರಣತಂತ್ರಕ್ಕೆ ಮತ್ತೊಬ್ಬ ರಾಜಕಾರಣಿ ಬೆಳೆಯಲು ಜಿ.ಎಸ್. ಪಾಟೀಲ್ ಕುಟುಂಬ ಒಪ್ಪುತ್ತಾ. ಅಪ್ಪನ‌ ಹಾದಿಯಲ್ಲಿರುವ ಮಿಥುನ್ ಪಾಟೀಲ್ ಅವರು ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸುತ್ತಾರಾ ಎಂಬುದನ್ನ‌ ಕಾದುನೋಡಬೇಕಿದೆ.‌

ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಜಿ.ಎಸ್ ಪಾಟೀಲ್ ಮತ್ತು ಬಿಜೆಪಿಯಿಂದ ಕಳಕಪ್ಪ ಬಂಡಿ ಹಿಡಿತ ಸಾಧಿಸಿದ್ದಾರೆ. ಕ್ಷೇತ್ರದ ಜನ ಪರ್ಯಾಯ ಬಯಸುತ್ತಿದ್ದಾರೆ. ಈ ಅವಧಿಯಲ್ಲಿ ಪರ್ಯಾಯವಾಗಿ ಬೆಳೆಯುವ ಶಕ್ತಿ ಯಾರಿಗಿದೆ. ಕ್ಷೇತ್ರದಲ್ಲಿ Delimitation ಆದ್ರೆ, ಎಸ್ಸಿಯಾಗುತ್ತದೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿದೆ. ಇದೆಲ್ಲದರ ನಡುವೆ ಜಿ.ಎಸ್ ಪಾಟೀಲ್ ಅವರ ಬಳಿಕ ಕಾಂಗ್ರೆಸ್ ಮುಂದಿನ ನಾಯಕ  ಯಾರು...?
Post a Comment

Post a Comment