-->
Bookmark

Gajendragad : ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ ಧರ್ಮದ ಧಾರ್ಮಿಕತೆ ಬಿತ್ತರಿಸುವ ಯಾವುದೇ ಚಟುವಟಿಕೆ ನಡೆಸಬಾರದು ; ಎಸ್ ಎಫ್ ಐ ಆಗ್ರಹ

Gajendragad : ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ ಧರ್ಮದ ಧಾರ್ಮಿಕತೆ ಬಿತ್ತರಿಸುವ ಯಾವುದೇ ಚಟುವಟಿಕೆ ನಡೆಸಬಾರದು ; ಎಸ್ ಎಫ್ ಐ  ಆಗ್ರಹ 

ಗಜೇಂದ್ರಗಡ : ( Feb_13_2026) 
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಶ್ರೀ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 14/02/2026 ರಂದು ಹಿಂದೂ ಸಮ್ಮೇಳನ ಹಮ್ಮಿಕೊಂಡಿದ್ದು, ಇದು ಶಿಕ್ಷಣ ಸಂಸ್ಥೆಗಳ ಸಂವಿಧಾನ ಉಲ್ಲಂಘನೆ ಕಾರ್ಯಕ್ರಮವಾಗಿದೆ ಎಂದು ಎಸ್ ಎಫ್  ಐ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ  ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, ಭಾರತ ಸಂವಿಧಾನವು ವಿಧಿ 28 ರಲ್ಲಿ ತಿಳಿಸಿರುವಂತೆ ವಿದ್ಯಾರ್ಥಿಗಳಿಗೆ ಜಾತ್ಯಾತೀತ ಶಿಕ್ಷಣ ನೀಡುವಂತೆ ನಿರ್ದೇಶಿಸುತ್ತದೆ. ಆದರೆ ಪಟ್ಟಣದ ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಕೋಮು ವಿಷಬೀಜ ಬಿತ್ತುವ ಸಂದೇಶವನ್ನು ನೀಡುತ್ತದೆ. ಅದರಿಂದ ವಿದ್ಯಾರ್ಥಿಗಳ ಮಧ್ಯೆ ಜಾತ್ಯತೀತ ಸೌಹಾರ್ದ ಭಾವನೆಯನ್ನು ಚಿದ್ರಗೊಳಿಸುವ ಹುನ್ನಾರವಾಗಿದೆ ಎಂದರು.
ನಂತರ ಎಸ್ ಎಫ್ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಥೋಡ್ ಮಾತನಾಡಿ, ಶಾಲಾ, ಕಾಲೇಜಿನ ಪರೀಕ್ಷೆ ನಡೆಯುವ ಆವರಣ, ನಾಳೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯುತ್ತಿದ್ದರು ಕೂಡ ಶಾಲಾ ಶಿಕ್ಷಣ ಇಲಾಖೆ - ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಇಂತಹ ಕೋಮು ಪ್ರಚೋದನೆಗೆ ಒಳಗಾಗುವ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದೆ. ಇದು ಸಂವಿಧಾನ ವಿರೋಧಿ, ಶಿಕ್ಷಣ ನೀತಿ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದೆ. ಪರಿಕ್ಷೆ ಇದ್ದರು ಕೂಡ ಇತಂಹ ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಸ ಎಫ್ ಐ ನ ತಾಲೂಕ ಅಧ್ಯಕ್ಷರಾದ ಅನಿಲ್ ಆರ್ ಮಾತನಾಡಿ, ಶಾಲೆಗಳು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಕೇಂದ್ರಗಳು ವಿನಹ ಧರ್ಮ ಬೋಧನೆಯ ಪಾಠಶಾಲೆಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, 
ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ. ಸಂವಿಧಾನ ವಿರೋಧಿ ಸಮ್ಮೇಳನ ವಿರೋಧಿಸಿ ನಾಳೆ ಶಾಲೆ ಆವರಣದಲ್ಲಿ ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಗಣೇಶ್ ರಾಥೋಡ್, ಚಂದ್ರು, ಅನಿಲ್, ಶರಣು, ರಾಹುಲ್, ಗುರು, ಈಶ್ವರ್ ಗುಡ್ಡದೇವಲಾಪುರ, ವೀರೇಶ್, ತುಕಾರಾಂ, ಆನಂದ್ ಹಾಗೂ ಇತರರು ಹಾಜರಿದ್ದರು ಎಂದು ಎಸ್.ಎಫ್.ಐ ಪ್ರಕಟಣೆಯಲ್ಲಿ ಕಿರಾ ನ್ಯೂಸ್ ಕನ್ನಡಕ್ಕೆ ತಿಳಿಸಿದೆ.
Post a Comment

Post a Comment