-->
Bookmark

Bengaluru : ಡೈವೋರ್ಸ್ ಎಂಬ ವಾಸ್ತವಕ್ಕೆ ಕನ್ನಡಿ ‘ಪ್ರೇಮ್ ಲವ್ಸ್ ನಂದಿನಿ'

Bengaluru : ಡೈವೋರ್ಸ್ ಎಂಬ ವಾಸ್ತವಕ್ಕೆ ಕನ್ನಡಿ ‘ಪ್ರೇಮ್ ಲವ್ಸ್ ನಂದಿನಿ'

ಬೆಂಗಳೂರ : (Feb_16_02_2026)
ಪ್ರೇಮಿಗಳ ದಿನ ಹಾಗೂ ಶಿವರಾತ್ರಿ ಹಬ್ಬದ ವಿಶೇಷವಾಗಿ ಹೊಸ ಪ್ರತಿಭೆಗಳೇ ಸೇರಿ ಸಿದ್ಧಪಡಿಸಿರುವ ‘ಪ್ರೇಮ್ ಲವ್ ನಂದಿನಿ’ ಕಿರುಚಿತ್ರವು ಬಿ ಆರ್ ಫಿಲಂ ಐಕಾನ್ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
   ಜೀ ಕನ್ನಡ ವಾಹಿನಿಯಲ್ಲಿ ಸುದೀರ್ಘ ಅನುಭವ ಹೊಂದಿರುವ ಬಸವರಾಜ ನಂದಿ ಅವರು  ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರತಿಭಾವಂತ ನಿರ್ದೇಶಕಿ ಸುಧಾ ಅಣ್ಣಾಶೇಠ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಮಾಧ್ಯಮ ಲೋಕದಲ್ಲಿ ಸಕ್ರಿಯರಾಗಿದ್ದ ಪತ್ರಕರ್ತ ವಿಶ್ವಪ್ರಕಾಶ ಟಿ. ಮಲಗೊಂಡ ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು ಇದು ಇವರ ೨೦ ನೇ ಚಿತ್ರ ಎನ್ನುವುದು ವಿಶೇಷ. ಪ್ರೇಮದ ಆಕರ್ಷಣೆಯಿಂದ ಆರಂಭವಾಗಿ ಜೀವನದ ಸಂಕೀರ್ಣ ಹಂತವಾದ ‘ವಿಚ್ಛೇದನ'ದವರೆಗೆ ಸಾಗುವ ಕಥೆಯಲ್ಲಿ ವಿಶ್ವಪ್ರಕಾಶ ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಅವರಿಗೆ ಜೋಡಿಯಾಗಿ ಸಿರಿ ವೆಂಕಟೇಶ್ ನಟಿಸಿದ್ದಾರೆ. "ಪ್ರೇಮದಿಂದ ಶುರುವಾಗಿ ಡಿವೋರ್ಸ್ ವರೆಗೂ ತಲುಪುತ್ತಿರುವ ಇಂದಿನ ಸಂಬಂಧಗಳ ವಾಸ್ತವವೇ ಈ ಚಿತ್ರದಲ್ಲಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹದ್ದಿದೆ" ಎನ್ನುತ್ತಾರೆ ನಿರ್ದೇಶಕಿ ಸುಧಾ ಅವರು. 
  ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ, ಪ್ರಸಾದ ತೋಟದ  ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಹರೀಶ್ ಅರಸು ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ, ನಿಂಗರಾಜ ಕಟ್ಟಿಗೇರಿ ಮೊದಲಾದವರು ತಾಂತ್ರಿಕವರ್ಗದಲ್ಲಿದ್ದಾರೆ.
**
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment

Post a Comment