ಬಿಜೆಪಿ ಕಾರ್ಯಕರ್ತರಿಂದಲೇ ಬಿಜೆಪಿ ವಿರುದ್ಧ ಪ್ರತಿಭಟನೆ
ಗಜೇಂದ್ರಗಡ : (Oct_16_2026)
ಪಟ್ಟಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಗುಂಪೊಂದು ಬೀದಿಗಿಳಿದು ಹೋರಾಟ ನಡೆಸಿದರು. ಇದು ಆಡಳಿತ ಪಕ್ಷದ ವಿರುದ್ಧ ಅಲ್ಲ. ಆಡಳಿತ ವಿರೋಧಿ ಪ್ರತಿಭಟನೆಯೂ ಆಗಿರಲಿಲ್ಲ. ಬದಲಾಗಿ ಕಮಲ ಪಾಳಯದಲ್ಲಿನ ಕೆಲ ಬದಲಾವಣೆಗಳು ತಮ್ಮದೆ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದರು.
ಬಿಜೆಪಿ ಪಕ್ಷದಲ್ಲಿ ಕಳಕಪ್ಪ ಬಂಡಿ ಅವರು ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ ನಿಜ. ಆದ್ರೆ, ಉಮೇಶ್ ಚನ್ನು ಪಾಟೀಲ್ ಅವರನ್ನ ಪಕ್ಕದಲ್ಲಿ ಕೂರಿಸಿ ತಮ್ಮ ಬೆಂಬಲಿಗರನ್ನಾಗಿ ಮಾಡಿಕೊಳ್ಳಲಿಲ್ಲ ಎಂಬುದು ಕೂಡ ಇಲ್ಲಿ ಚರ್ಚೆಯ ವಿಷಯವಾಗಿದೆ. ಉಮೇಶ್ ಅವರಿಗೆ ಯಾವುದೇ ರಾಜಕೀಯ ಅನುಭವ ಇರಲಿಲ್ಲ. ಪಕ್ಷದ ಟಿಕೇಟ್ ಕೇಳುವುದರಲ್ಲಿ ತಪ್ಪಿಲ್ಲ. ಮಾಜಿ ಸಚಿವರಾದ ಕಳಕಪ್ಪ ಬಂಡಿ ಅವರು, ತಮ್ಮ ಅನುಭವವನ್ನ ತೋರಿಸಬಹುದಿತ್ತು. ಆದ್ರೆ, ರಾಜಕೀಯ ವಲಯದಲ್ಲಿ ಯಾರನ್ನು ದೂರುವಂತಿಲ್ಲ. ಬದಲಾಗಿ ಎಲ್ಲರನ್ನ ಮತದಾರರನ್ನಾಗಿ ಪರ್ತಿಸುವ ತಂತ್ರಗಾರಿಕೆ, ಚಾಣಾಕ್ಷತೆ ಕೂಡ ಮುಖ್ಯ.
ಆಡಳಿತ ಪಕ್ಷದ ಜನ ವಿರೋಧಿ ಅಲೆಯನ್ನ ಬಳಸಿಕೊಂಡು ಚುನಾವಣೆ ಎದುರಿಸಲು ಇದು ಸಕಾಲವಾಗಿತ್ತು. ಆದ್ರೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದರೆ ತಪ್ಪಾಗಲ್ಲ. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ವಿರುವುದನ್ನ ಅಲ್ಲಿಲ್ಲಿ ಚರ್ಚೆ ಮಾಡುತ್ತಿದ್ದರು. ಆದ್ರೆ, ಈಗ ಅವರ ಆಂತರಿಕ ಜಗಳ ಬೀದಿಗೆ ಬಿದ್ದಿದೆ.
ಕಳಕಪ್ಪ ಬಂಡಿ ಅವರಿಗೆ ರಾಜಕೀಯ ಮಾಡಲು ವಿಷಯ ವಿರಲಿಲ್ಲ. ಚೆನ್ನಮ್ಮ ಸರ್ಕಲ್ ನಲ್ಲಿ ನಡೆದ ಮೂರ್ತಿ ತೆರವು ಪ್ರಕರಣವನ್ನ ದೊಡ್ಡದಾಗಿ ಬಳಸಿಕೊಳ್ಳಲು ಅವರಿಗೆ ಪರೋಕ್ಷವಾಗಿ ತಮ್ಮ ಕುಟುಂಬದಿಂದಲೇ ಬೆಂಬಲ ಇದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇದು ಒಂದೆಡೆಯಾದ್ರೆ, ಮತ್ತೊಂದೆಡೆ, ಸಾಲು ಸಾಲು ಆಕಾಂಕ್ಷಿಗಳು ಇದ್ದಾರೆ. ಎಲ್ಲರನ್ನೂ ಪಕ್ಷದಿಂದ ಉಚ್ಛಾಟಿಸುತ್ತಾ ಹೋದರೆ ಪಕ್ಷದ ಸಿದ್ದಾಂತ, ವರ್ಚಸ್ಸು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಎದುರಾಗಿದೆ. ಕ್ಷೇತ್ರದಲ್ಲಿ ಪರ್ಯಾಯ ಶಕ್ತಿ ಹುಟ್ಟುಹಾಕುವಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಇದೆ. ಈ ಹಂತದಲ್ಲಿ ಈ ರೀತಿಯ ಬೆಳವಣಿಗೆ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಲಿದೆ.
ಪಶ್ಚಿಮ ಪದವಿಧರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿತ್ತು. ಆದ್ರೆ, ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯದಲ್ಲಿ ಮುಳುಗಿರುವಾಗ 'ಕೈ' ಪಾಳಯಕ್ಕೆ ಈ ಚುನಾವಣೆ ಸುಲಭದ ತುತ್ತಾಗಿಸುತ್ತಿದೆ ಖುದ್ದು ಬಿಜೆಪಿ. ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಹಿನ್ನಡೆಯಾದ್ರೆ, ಅದರ ಹೊಣೆಯಾರಿಗೆ....?
ಈಗ ಚನ್ನು ಪಾಟೀಲ್ ಅವರ ಬಗ್ಗೆ ಹೇಳುವುದಾದ್ರೆ, ಕ್ಷೇತ್ರದಲ್ಲಿ ಬಿಜೆಪಿ ಬೆಳೆಯಲು ಕಳಕಪ್ಪ ಬಂಡಿ ಅವರ ಸಮಬಲದ ಪರಿಶ್ರಮ ಇದೆ. ಚನ್ನು ಪಾಟೀಲ್ ಅವರು ಮುಂದೊಂದು ದಿನ ಎಂ.ಎಲ್.ಎ ಆಗುತ್ತಾರೆ ಎಂದು ಎರಡು ದಶಕದ ಹಿಂದೆಯೇ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿತ್ತು. ಅವರ ಕಾಲಾನಂತರ ಅವರ ಸುಪುತ್ರ ಉಮೇಶ್ ಚನ್ನು ಪಾಟೀಲ್, ತಂದೆ ಚನ್ನು ಪಾಟೀಲ್ ಹಾಕಿಕೊಟ್ಟ ಮಾರ್ಗದರ್ಶನದಲ್ಲೆ ಬೆಳೆದು ಅವರ ಕಾಯಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪಕ್ಷದ ಸಿದ್ದಾಂತ, ಪಕ್ಷದ ಚೌಕಟ್ಟು, ಪಕ್ಷದ ಇತಿಮಿತಿಯಲ್ಲೆ ಕಾರ್ಯನಿರ್ವಹಿಸುವ ಕಟ್ಟಾ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ.
ಇನ್ನೂ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುಮಾವಣೆಗಳು ಎದುರಿಗಿವೆ. ಬಿಜೆಪಿ ಒಡೆದ ಮನೆಯಲ್ಲಿ ಚುನಾವಣೆಯ ನೇತೃತ್ವ ವಹಿಸುವುದಾದರು ಯಾರು ಎಂಬುದನ್ನ ಕಾದು ನೋಡಬೇಕಿದೆ.
ಈ ಬಗ್ಗೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂದು ಮೊದಲು ಸುದ್ದಿ ಪ್ರಕಟಿಸಿದ್ದೆ ಕಿರಾ ನ್ಯೂಸ್ ಕನ್ನಡ.
ಕೃಷ್ಣ ರಾಠೋಡ್
ಸಂಪಾದಕರು
ಕಿರಾ ನ್ಯೂಸ್ ಕನ್ನಡ
ಗಜೇಂದ್ರಗಡ
ಮೊ : 8197474996



Post a Comment