ಹೊಳೆಆಲೂರು : ( May_19_2026)
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರಲ್ಲಿ ಉತ್ತಮ ಉದ್ಯೋಗ ಉಜ್ವಲ ಭವಿಷ್ಯದ ಹಿನ್ನೆಲೆಯಲ್ಲಿ ಹೊಳೆಆಲೂರು ಹಾಗೂ
ಸುತ್ತಮುತ್ತಲಿನ ಯುವಕ-ಯುವತಿಯರಿಗೆ
ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ
ಉದ್ದೇಶದಿಂದ ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಕವಿಪ್ರ ಸಮಿತಿಯ
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾ
ಲಯದಿಂದ ಇದೆ
ಮೇ. 21ರಂದು ಕ್ಯಾಂಪಸ್ ಸಂದರ್ಶನ ಆಯೋಜಿ
ಸಿದೆ. ಬೆಳಿಗ್ಗೆ 10 ಕ್ಕೆ ಮಹಾವಿದ್ಯಾಲಯದ ಆವರಣದಲ್ಲಿ
ನಡೆಯಲಿದ್ದು, ಟಾಟಾ, ಎಲೆಕ್ಟ್ರಾನಿಕ್ಸ್
ಮೋಟಾರ್ಸ್, ಇಂಡೋ ಮಿಮ್, ಮದರಸನ್
ಸೇರಿದಂತೆ ಖ್ಯಾತ ಕೈಗಾರಿಕಾ ಸಂಸ್ಥೆಗಳು ನೇರ
ಸಂದರ್ಶನ ನಡೆಸಲಿದ್ದು, ಎಸ್ ಎಸ್ ಎಲ್ ಸಿ,ಪಿಯುಸಿ,ಡಿಪ್ಲೊಮಾ ಮತ್ತು ಯಾವುದೇ ಪದವಿ ಪಡೆದ 18 ರಿಂದ 26
ವರ್ಷದೊಳಗಿನ ಯುವಕರು/ಯುವತಿಯರು ಹೆಚ್ಚಿನ ಸಂಖ್ಯೆ
ಯಲ್ಲಿ ಭಾಗವಹಿಸಬೇಕೆಂದು ಪ್ರಾಚಾರ್ಯ ಡಾ.ಎಸ್.ಬಿ.ಸಜ್ಜನರ ಹೇಳಿದ್ದಾರೆ. ಅಭ್ಯರ್ಥಿಗಳು
ಅಂಕಪಟ್ಟಿ, ಆಧಾರ್, ಪಾನ್ ಕಾರ್ಡ್ ಹಾಗೂ
ಪಾಸ್‌ಪೋರ್ಟ್ ಗಾತ್ರದ ಎರಡು ಭಾವಚಿತ್ರಗಳನ್ನು ತರ
ಬೇಕು. ಒಟ್ಟು ನಾಲ್ಕು ಸೆಟ್ ಮಾಡಿಕೊಂಡು ಬರ
ಬೇಕೆಂದು ಸೂಚಿಸಲಾಗಿದೆ. ಸ್ಥಳದಲ್ಲೇ ಅರ್ಜಿ
ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಮಾಹಿತಿಗೆ
9353338277,9632966801
ಸಂಪ
ರ್ಕಿಸಬಹುದು. ಕಾರ್ಯಕ್ರಮದ ಅಧ್ಯಕ್ಷತೆ
ಯನ್ನು ಪ್ರಾಚಾರ್ಯ ಡಾ. ಎಸ್. ಬಿ.
ಸಜ್ಜನರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ
ಸಂಸ್ಥೆ ಅಧ್ಯಕ್ಷ ಬಿ.ಸಿ. ಪಾಟೀಲ ಹಾಗೂ ವಿವಿಧ
ಗಣ್ಯರು ಭಾಗವಹಿಸಲಿದ್ದಾರೆ ಎಂದು
ಆಯೋಜಕರಾದ ಡಾ.ಕುಮಾರ ವೈ.ಹಂಜಗಿ ತಿಳಿಸಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ.9448775346



Post a Comment