ಬಾಗಲಕೋಟೆ : (Jun_08_2026)
ಕಿರಾ ನ್ಯೂಸ್ ಕನ್ನಡ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಪರಿಕರಗಳ ಮಾರಾಟಕ್ಕೆ ಸಂಭಂಧಿಸಿದಂತೆ ಕುಟುಕು ಕಾರ್ಯಾಚರಣೆ ನಡೆಸಿತ್ತು. ಈ ಕುಟುಕು ಕಾರ್ಯಾಚರಣೆಗೆ ಸಂಭಧಿಸಿದಂತೆ ಈಗ ಕಿರಾ ನ್ಯೂಸ್ ಕನ್ನಡಕ್ಕೆ ಬೆದರಿಕೆ ಕರೆಗಳು ಬರುತ್ತಿವೆ.
ಸುದ್ದಿ Delete ಮಾಡಿ, ಮುಂದಿನ ಸಂಚಿಕೆ ಪ್ರಕಟಿಸಬೇಡಿ ಎಂದು ಫೋನ್ ಕರೆಗಳು ಬರುತ್ತಿವೆ. Truecallr ನಲ್ಲಿ ಶಶಿಧರ್ ಜ್ಯಾಲಿ ಎಂದು ಹೆಸರು ಬರುವ ವ್ಯಕ್ತಿಯೂ 8867038405 ನಂಬರಿನಿಂದ ಕರೆ ಮಾಡಿ ಸುದ್ದಿ ಅಳಿಸಿ ಹಾಕಿ ಎಂದು ಬೇದರಿಕೆ ಹಾಕಿದ್ದಾರೆ.
ಹೀಗೆ, ಮಾಡುವುದರಿಂದ ಬಾಗಲಕೋಟೆ ಜಿಲ್ಲಾಸ್ಪತ್ರೆಲಿ ಟಿಬಿ ಸೆಕ್ಷನ್ ನ ಇನ್ ಚಾರ್ಜ್ ಶ್ರೀಮತಿ ಸುವರ್ಣಾ ಕುಲಕರ್ಣಿ ಅವರು ಶಾಮೀಲಾಗಿರುವುದು ಖಚಿತ ಎಂಬ ಅನುಮಾನಗಳು ಶುರುವಾಗುತ್ತವೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ವರ್ಷ 6 ಲಕ್ಷ ಹಣ ಲೂಟಿ ಹೊಡೆಯುತ್ತಾರೆ ಎಂಬ ಆಘಾತಕಾರಿ ಅಂಶವಮ್ನ ಸ್ವತಃ ಟಿಬಿ ಸೆಕ್ಷನ್ ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕ್ರಯ್ಯ ಹಳಿ ಬಾಯ್ಬಿಟ್ಟಿದ್ದರು.
ಮುಂದಿನಭಾಗ ನಿರೀಕ್ಷಿಸಿ ಎಂದು ಸುದ್ದಿ ಬಿತ್ತರವಾದ ನಂತರ ಅನೇಕ ಬೆದರಿಕೆ ಕರೆಗಳು ಬರುತ್ತಿವೆ. ಇದರ ಹಿಂದೆ ಟಿಬಿ ಸೆಕ್ಷನ್ ಇನ್ ಚಾರ್ಜ್, ಸುವರ್ಣ ಕುಲಕರ್ಣಿ ಅವರ ಕೈವಾಡ ವಿರುವುದು ಖಚಿತ ಎಂದು ಭಾಸವಾಗುತ್ತಿದೆ.
ಬೆರದಿಕೆ ಕರೆಗಳು ಈ ಎಲ್ಲ ಆರೋಪಗಳಿಗೂ ಇದೆಲ್ಲದಕ್ಕೂ ಪುಷ್ಟಿ ನೀಡುವಂತಿದೆ. ಈಗ ಶಂಕ್ರಯ್ಯ ಎಂಬುವವರು ಡಿ.ಹೆಚ್.ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಕೆಲವರು ಹೇಳಿದರೇ, ಮತ್ತೆ ಕೆಲವರು ಅವರನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದವರೇ ಇನ್ನೂ silent ಆಗಿರುವುದು ಯಾಕೆ ಎಂಬ ಪ್ರಶ್ನೆಯನ್ನ ಸಾರ್ವಜನಿಕರು ಕೇಳುತ್ತಿದ್ದಾರೆ. ಶಂಕ್ರಯ್ಯ ಎಂಬುವವರು ಈಗ DHO ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಾದರೇ, ಅವರ ಮೇಲೆ ಕ್ರಮ ಕೈಗೊಳ್ಳದೇ, ಭಕ್ಷಕರನ್ನೆ ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈಗ ಸಂಬಂಧ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಟ್ಯಾಕ್ಸ್ ರೂಪದಲ್ಲಿ ನೀಡಿದ ಹಣವನ್ನ ಲೂಟಿ ಮಾಡುತ್ತಿರುವ ಅಧಿಕಾರಿಗಳಿಗೆ ಕೂಡಲೇ ಅಮಾನತ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



Post a Comment