ಬೆಂಗಳೂರು : (Aug_17_2026)
ಸಾವಿತ್ರಿ ರಾಮಚಂದ್ರ ಬ್ಯಾನರ್ ಅವರ ‘ಗುಲಾಬಿ’ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ
ಸ್ವಪ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.ರಕ್ಷಕ-೨ ಚಲನಚಿತ್ರದ ೫೦ನೇ ದಿನದ ಸಂಭ್ರಮಾಚರಣೆಯ ಜೊತೆಗೆ
ಡಾ.ಆರ್.ವಿಜಯಕುಮಾರ್ ನಟಿಸಿ ಪ್ಯಾನ ಇಂಡಿಯಾ ಮಟ್ಟದಲ್ಲಿ ನಿರ್ಮಿಸಿ ನಿರ್ದೇಶಿಸಿರುವ
ನಾಲ್ಕನೇ ಚಿತ್ರ ‘ಗುಲಾಬಿ’ಯ ಮೊದಲ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಉದ್ಯಮದ ನಟ, ನಟಿಯರು, ತಂತ್ರಜ್ಞರು ಮತ್ತು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಕ್ಷಕರ ಅಮೃತಹಸ್ತದಿಂದ
ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ವಪ್ನ ಚಿತ್ರ ಮಂದಿರದ ಮಾಲೀಕರಾದ ಮನೋಹರ ಮತ್ತು ಸಿಬ್ಬಂದಿ ವರ್ಗಕೂಡ ಪಾಲ್ಗೊಂಡು
ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ, ತಾತಗುಣಿ, ಭೂಮಿಕಾ ಸ್ಟುಡಿಯೋ, ಕನಕಪುರ ಸುತ್ತಮುತ್ತ ನಡೆಸಲಾಗಿದ್ದು, ಆರು ಹಾಡುಗಳು, ಆರು ಸಾಹಸ ದೃಶ್ಯಗಳಿವೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಈ ಮೊದಲಿನ ನನ್ನ ಚಿತ್ರಗಳು ೫೦ ದಿನಗಳು, ಶತದಿನೋತ್ಸವ ಆಚರಿಸಿದ್ದು ಇದಕ್ಕೆಲ್ಲ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ ಎಂದು ನಿರ್ದೇಶಕ ಡಾ.ವಿಜಯಕುಮಾರ್ ತಿಳಿಸಿದರು. ತಾರಾಗಣದಲ್ಲಿ ನಾಯಕರಾಗಿ ಡಾ.ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ, ಸುರೇಂದ್ರ ಕುಮಾರ್, ಅಜಿತ್‌ಜೈನ್, ಲೋಕೇಶ್ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರೇಶ, ಸಂಗೀತ ಸಂತೋಷ ಜೋಶ್ವ, ಪ್ರಸಾಧನ ನಾಗೇಶ, ಕೊರಿಯೋಗ್ರಫಿ ಬಾಲಕೃಷ್ಣ, ಸಾಹಸ ಗುಲಾಬಿ ಚಿನ್ನಯ್ಯ, ಸಂಕಲನ ನಿಸಿತ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ವಾಸುದೇವ ಶೆಟ್ಟಿ ಎಚ್.ಎಸ್, ಸಹನಿರ್ದೇಶನ ಎಸ್.ಮೇಘರಾಜ ಗೌಡ, ನಿರ್ಮಾಣ ಉಸ್ತುವಾರಿ ಮತ್ತು ವಸ್ತ್ರವಿನ್ಯಾಸ ಅನಿತಾಶ್ರೀ, ಕಥೆ-ಚಿತ್ರಕಥೆ-
ಸಂಭಾಷಣೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಈಗಾಗಲೇ ದೊಡ್ಡಣ್ಣ ಪುಟ್ಟಣ್ಣ, ರಕ್ಷಕ ಮತ್ತು ರಕ್ಷಕ-೨ ಮೂರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಡಾ.ವಿಜಯಕುಮಾರ್ ಹೊತ್ತಿದ್ದಾರೆ.
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬



Post a Comment