-->
Bookmark

Gajendragad :ಚಂದ್ರನ ಮೇಲೆ ಭಾರತೀಯರು : ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ ಸಿದ್ದಪ್ಪ ಬಂಡಿ

Gajendragad :

ಚಂದ್ರನ ಮೇಲೆ ಭಾರತೀಯರು : ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ ಸಿದ್ದಪ್ಪ ಬಂಡಿ 

ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದು ಭಾರತೀಯರಿಗೆ ಅತ್ಯಂತ ಸಂತೋಷದ ಮತ್ತು ಹೆಮ್ಮೆಯ ವಿಷಯ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಹೆಮ್ಮೆ ವ್ಯಕ್ತಪಡಿಸಿದರು. 

ಪಟ್ಟಣದ ಮೈಸೂರು ಮಠದಲ್ಲಿ ಬುಧವಾರ ಸಂಜೆ ವೀರಶೈವ ಲಿಂಗಾಯತ ಸಮಾಜದಿಂದ ಏರ್ಪಡಿಸಿದ ಶ್ರೀ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಚಂದ್ರಯಾನ - ೩ ರ ಸಂಭ್ರಮಾಚರಿಸಿ, 
ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದರು. 
ಈ ವೇಳೆ ಮಾತನಾಡಿದ ಸಿದ್ದಪ್ಪ ಬಂಡಿ ಅವರು, ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವೇ ಯಶಸ್ಸಿಗೆ ಕಾರಣ ಎಂದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೩ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಗಳನ್ನು ಜಗತ್ತು ಆಶ್ಚರ್ಯದಿಂದ  ನೋಡುವಂತೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.  
ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆ ಕ್ಷಣ. ಇಂತಹ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಸಿದ್ದಪ್ಪ ಬಂಡಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಭು ಚವಡಿ, ಎ. ಪಿ.ಗಾಣಿಗೆರ, ಶಿವಕುಮಾರ ಕೊರಧಾನ್ಯಮಠ, ಅಪ್ಪು ಮತ್ತಿಕಟ್ಟಿ, ಪ್ರಭು ಹಿರೇಮಠ, ಮಲ್ಲಯ್ಯಸ್ವಾಮಿ ಗುರುಸ್ಥಳಮಠ, ಬಸವರಾಜ ಚನ್ನಿ,  ಶಿವಯ್ಯ ಚಕ್ಕಡಿಮಠ, ಅಮರಯ್ಯ ಗೌರಿಮಠ, ವಿಶ್ವನಾಥ ಕುಷ್ಟಗಿ, ಮುತ್ತಣ್ಣ ಮೆಣಸಿನಕಾಯಿ, ರಾಕೇಶ ಮಾರನಬಸರಿ, ಸುನೀಲ ನಂದಿಹಾಳ, ಶ್ರೀಕಾಂತ ತಾಳಿಕೋಟಿ, ಬಸವರಾಜ ರೇವಡಿ, ಅಕ್ಷಯ ಬಂಡಿ, ವೀರೇಶ ಸಂಗಮದ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

Post a Comment

Post a Comment