-->
Bookmark

SocialMedia : ಗೃಹ ಬಳಕೆ ಸಿಲಿಂಡರ್ ಬೆಲೆ ಇಳಿಕೆ : ಪ್ರಕಾಶ ರಾಜ್ ಟೀಕೆ, ಅವಧ ಒಜಾ ಟ್ವೀಟ್ ( X ) ವೈರಲ್

Social Media : 
ಗೃಹ ಬಳಕೆ ಸಿಲಿಂಡರ್ ಬೆಲೆ ಇಳಿಕೆ : ಪ್ರಕಾಶ ರಾಜ್ ಟೀಕೆ, ಅವಧ ಒಜಾ ಟ್ವಿಟ್ ( X ) ವೈರಲ್ 

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎಲ್ಲ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ₹200 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.

ಓಣಂ ಮತ್ತು ರಕ್ಷಾಬಂಧನ್ ಹಬ್ಬದ ಹಿನ್ನೆಲೆಯಲ್ಲಿ ಎಂದು ಸರ್ಕಾರ ಸರ್ಥಿಸಿಕೊಂಡರೂ,  ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿಯೇ ತೆಗೆದುಕೊಂಡಿರುವ ಈ ನಿರ್ಧಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಕೇಂದ್ರ ಸರ್ಕಾರದ ನಡೆಯನ್ನ ಬಹುಭಾಷಾ ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ. ‘ಇದು ಹೊಸ ಜುಮ್ಲಾ. ಸಾವಿರ ದರೋಡೆ ಮಾಡಿ, ಇನ್ನೂರು ಉಡುಗೊರೆಯಾಗಿ ಹಿಂತಿರುಗಿಸುವುದು’ ಎಂದು ಟ್ವೀಟ್  ಮಾಡಿದ್ದಾರೆ. 

200 ರೂ ಕಡಿಮೆ ಮಾಡಿರುವ ಬಗ್ಗೆ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದು, . ಈ ಹೇಳಿಕೆಯನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ರೀಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, ‘ಇದು ಹೊಸ ಜುಮ್ಲಾ’ ಎಂದು ಟೀಕಿಸಿದ್ದಾರೆ.
ಈ ನಡುವೆ ಡಾ. ನಿಮೋ ಯಾದವ್ ಎಂಬ ಟ್ವಿಟರ್ ( X ), ಅನ್ ಅಕಾಡೆಮಿ ಆನ್‌ಲೈನ್ ತರಗತಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರೊಫೆಸರ್ ಅವಧ್ ಒಜಾ ಗ್ಯಾಸ್ ದರಕ್ಕೆ ಸಂಬಂಧಿಸಿ ಕಳೆದ ತಿಂಗಳು ನೀಡಿದ್ದ ಹೇಳಿಕೆಯನ್ನ ಟ್ವೀಟ್ ( X ) ಮಾಡಿದ್ದಾರೆ. ತಿಂಗಳ ಹಿಂದೆಯೇ ದರ ಇಳಿಕೆಯ ಬಗ್ಗೆ ಈ ಪ್ರೊಫೆಸರ್ ಭವಿಷ್ಯ ನುಡಿದಿದ್ದರು. ಚುನಾವಣೆ ಹಿನ್ನೆಲೆ ಸಿಲಿಂಡರ್,
ಪೆಟ್ರೋಲ್, ಡಿಸೇಲ್ ಬೇಲೆ ಇಳಿಕೆಯಾಗಲಿದೆ. 4.5 ವರ್ಷ ಜನರಿಂದ ಹಣ ಪಡೆದು, 6 ತಿಂಗಳಿಗೆ ಅವರಿಗೆ ಅದೇ ದುಡ್ಡಿನಲ್ಲಿ ರಿಯಾಯ್ತಿ ನೀಡುವುದು. 
ಇದು ಮೂರ್ಖರಿಗೆ ಮೂರ್ಖರನ್ನಾಗಿಸುವುದು. ತಿಳುವಳಿಕೆಯುಳ್ಳವರು ರಾಜಕೀಯದಲ್ಲಿದ್ದಾರೆ. ಇದು ರಾಜಕೀಯದ ಮೂಲಭೂತ ತತ್ವ ಎಂದು ಹೇಳಿದ್ದರು.
Post a Comment

Post a Comment