-->
Bookmark

Holealur : ರೈಲಿನಡಿ ಸಿಲುಕಿ ಮೊಸಳೆ ಸಾವು : ಅರಣ್ಯ ಇಲಾಖೆ, ರೈಲ್ವೇ ಅಧಿಕಾರಿಳ ಭೇಟಿ ಪರಿಶೀಲನೆ

Holealur : ರೈಲಿನಡಿ ಸಿಲುಕಿ ಮೊಸಳೆ ಸಾವು : ಅರಣ್ಯ ಇಲಾಖೆ, ರೈಲ್ವೇ ಅಧಿಕಾರಿಳ ಭೇಟಿ ಪರಿಶೀಲನೆ 
ಹೊಳೆಆಲೂರು : (Oct_02_2023)

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ವ್ಯಾಪ್ತಿಯಲ್ಲಿ ರೈಲಿನಡಿ ಸಿಲುಕಿ ಮೊಸಳೆ ಸಾವನ್ನಪ್ಪಿದೆ. ಕಳೆದೆರಡು ಮೂರು ದಿನಗಳಿಂದ ಹೊಳೆಆಲೂರು ಭಾಗದಲ್ಲಿ ವ್ಯಾಪಕ‌ ಮಳೆಯಾಗುತ್ತಿದೆ. ನದಿಯಲ್ಲಿ ನೀರಿನ‌ ಪ್ರಮಾಣ ಹೆಚ್ಚಾಗಿದ್ದರಿಂದ ಮೊಸಳೆ ಆಹಾರ ಅರಸಿ ಬಂದಿರಬಹುದೆಂದು ಶಂಕಿಸಲಾಗಿದೆ. ಮೊಸಳೆ ಟ್ರ್ಯಾಕ್ ಮೇಲೆ ಬಂದಾಗಲೇ ರೈಲು ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. 
ಘಟನೆ ಬಳಿಕ ಸ್ಥಳೀಯರು ನೋಡಿ, ರೈಲ್ವೆ ಟ್ರ್ಯಾಕ್ ನಿಂದ ಮೊಸಳೆಯನ್ನ  ಟ್ರ್ಯಾಕ್ ನಿಂದ ಹೊರ ಎಳೆದು ತಂದಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ರೈಲ್ವೇ ಇಲಾಖೆ ಸಿಬ್ಬಂದಿಗಳು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Post a Comment

Post a Comment