-->
Bookmark

Sudi : ಸೂಡಿ ಆಸ್ಪತ್ರೆ ಗುಣಗಾನ ಮಾಡಿದ ಆಧುನಿಕ ಗಾಂಧಿ ಮುತ್ತಣ್ಣ

Sudi : ಸೂಡಿ ಆಸ್ಪತ್ರೆ ಗುಣಗಾನ ಮಾಡಿದ ಆಧುನಿಕ ಗಾಂಧಿ ಮುತ್ತಣ್ಣ 
ಸೂಡಿ : ( Oct_05_2023)
ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥಿತ ಶುದ್ಧ ವಾತಾವರಣ ನೋಡಿದರೆ ಸಾಕು, ಔಷಧ, ಯಾವುದೇ ಇಂಜೆಕ್ಷನ್ ಇಲ್ಲದೆ ಗುಣಮುಖರಾಗುತ್ತಾರೆ ಎಂದು ಆಧುನಿಕ ಗಾಂಧಿ ಎಂದೇ ಹೆಸರಾಗಿರುವ, ಮಹದಾಯಿ ಹೋರಾಟಗಾರ ತಿರ್ಲಾಪೂರ ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಅವರು 154 ನೇ ಗಾಂಧಿ ಜಯಂತಿ ದಿನಾಚರಣೆ ಹಿನ್ನೆಲೆ  ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ, ಮಾತನಾಡಿದ ಅವರು, ನಾನು ಈ ಆಸ್ಪತ್ರೆಗೆ ಬರುತ್ತಿರುವುದು ಎರಡನೇ ಸಾರಿ, ಈ ಆಸ್ಪತ್ರೆಗೆ ಮನ ಸೋತಿದ್ದೇನೆ. ಇಲ್ಲಿಯ ಸಿಬ್ಬಂದಿಯ ಅತಿಯಾದ ಕಾಳಜಿ ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಹೇಳಿದರು. ಆಸ್ಪತ್ರೆ ಆವರಣ ಹಸಿರಿನಿಂದ ಕಂಗೊಳಿಸುವ ಸೌಂದರ್ಯ ಅನಾರೋಗ್ಯ ಪೀಡಿತರನ್ನ ಔಷಧ ವಿಲ್ಲದೇ, ಗುಣಪಡಿಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೋಬಳಿ ಮಟ್ಟದಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆಗೆ ವಿಶ್ವಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸಿದರು.  
ಈ ಸಂದರ್ಭದಲ್ಲಿ ಜುಕ್ತಿ ಮಠದ ಕೊಟ್ಟೂರು ಬಸವೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಹಳ್ಳಿ ಭಾಗದಲ್ಲಿ ಇಂತಹ ಆಸ್ಪತ್ರೆ ನೋಡಿ ಬಹಳ ಸಂತೋಷವಾಗಿದೆ. ವಿಶಿಷ್ಟ ಸೌಲಭ್ಯಗಳು ರೋಗಿಗಳಿಗೆ ದೊರೆಯುತ್ತಿದ್ದು, ಇಲ್ಲಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಾಹಸ ಮೆಚ್ಚುವಂಥದ್ದು, ಈ ಆಸ್ಪತ್ರೆಗೆ ಸರ್ಕಾರದಿಂದ ಗೌರವ ಸಲ್ಲಬೇಕು ಎಂದು ತಿಳಿಸಿದರು. 
ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶರಣು ಗಾಣಿಗೇರ ಸೇರಿದಂತೆ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Post a Comment

Post a Comment