-->
Bookmark

Gajendragad : 8ನೇ ತರಗತಿ ವಿದ್ಯಾರ್ಥಿನಿ ಸಾಧನೆ : ಅನುಶ್ರೀ ಶ್ರಮಕ್ಕೆ ಮೆಚ್ಚುಗೆ

Gajendragad : 8ನೇ ತರಗತಿ ವಿದ್ಯಾರ್ಥಿನಿ ಸಾಧನೆ : ಅನುಶ್ರೀ ಶ್ರಮಕ್ಕೆ ಮೆಚ್ಚುಗೆ 
ಗಜೇಂದ್ರಗಡ : (Feb_17_02_2024)

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸಲು ಶ್ರಮಿಸುತ್ತಿದ್ದಾರೆ. ಅದಕ್ಕೆ ಉತ್ತಮ ನಿದರ್ಶನ ಅಂದ್ರೆ, ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ಪವಾರ್ ಒಟ್ಟು 9 ಮೆಡಲ್ ಗಳನ್ನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕ್ರೀಡೆಯಲ್ಲಿ ಸುಮಾರು 5 ಮೆಡಲ್ ಮತ್ತು ಆ್ಯಕ್ಟಿವಿಟಿಯಲ್ಲಿ 4 ಮೆಡಲ್ ಪಡೆದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಪಾಲಕರಾದ ನಾಗೇಶ್ ಪವಾರ್ ಮತ್ತು ಅಂಬುಜಾ ಪವಾರ್ ಶಿಕ್ಷಕರು ಮಕ್ಕಳ‌ ಜೀವನ ರೂಪಿಸಲು ಶ್ರಮಿಸುತ್ತಿದ್ದಾರೆ. ಮಗಳಾದ ಅನುಶ್ರೀ ಅಹ ಕ್ರೀಡೆ ಸೇರಿದಂತೆ ಎಲ್ಲ ಚಟುವಟಿಕೆಯಲ್ಲೂ ಭಾಗವಹಿಸಿ, ಆತ್ಮ ಸ್ಥೈರ್ಯದಿಂದ ಮೆಡಲ್ ಪಡೆದುಕೊಂಡಿದ್ದು ಸಂತಸ ತಂದಿದೆ. ಶಾಲೆಯ ಎಲ್ಲ ಶಿಕ್ಷಕರಿಗೂ ಧನ್ಯವಾದ ತಿಳಿಸಿದ್ದಾರೆ. 
ಈ ಮಧ್ಯೆ, ಮೂರನೇ ತರಗತಿ ವಿದ್ಯಾರ್ಥಿನಿ ಸನಾ ನಾಗೇಶ್ ಪವಾರ್ ಸಹ ಹಿಂದಿ ಕ್ಯಾಲಿಗ್ರಫಿಯಲ್ಲಿ ಎರಡನೇ ಬಹುಮಾನ ಪಡೆದಿದ್ದಾರೆ. 

ಇದೇ ವೇಳೆ, ಮಾತನಾಡಿದ ಶಾಲೆಯ ಪ್ರಿನ್ಸಿಪಲ್ ಕವಿತಾ ಪಾಟೀಲ್, ವಿದ್ಯಾರ್ಥಿನಿ ಎಲ್ಲ ಚಟುವಟಿಕೆಯಲ್ಲೂ ಭಾಗವಹಿಸಿದ್ದಾರೆ. ಕೇವಲ ಶಾಲಾ ಶಿಕ್ಷಕರಷ್ಟೇ ಅಲ್ಲ. ಪಾಲಕರು ಸಹ ಮಕ್ಕಾಳ ಜೀವನ ರೂಪಿಸಲು ಶ್ರಮಿಸುತ್ತಿದ್ದಾರೆ. ಅನುಶ್ರೀ ಸಾಧನೆ‌  ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಕವಿತಾ ಪಾಟೀಲ್ ಹೇಳಿದ್ದಾರೆ. 

ಇನ್ನೂ, ಕ್ಲಾಸ್ ಟೀಚರ್ ಉಷಾ ಉಡತೆ ಮಾತನಾಡಿ, ವಿದ್ಯಾರ್ಥಿನಿ ಶ್ರಮವನ್ನ ಶ್ಲಾಘಿಸಿದ್ದಾರೆ. 

ಅದೇನೇ ಇರಲಿ, ಮಕ್ಕಳನ್ನ ಕೇವಲ ಓದಿನಲ್ಲಷ್ಟೇ ಅಲ್ಲದೇ, ಇತರೆ ಚಟುವಟಿಕೆಯಲ್ಲೂ ಭಾಗವಹಿಸುವಂತೆ ಪ್ರೇರೇಪಿಸಿ, ಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಜಗದ್ಗುರು ತೋಂಟದಾರ್ಯ ಮಹಾ ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.

ದೈಹಿಕ ಉಪನ್ಯಾಸಕರಾದ ಗುರುರಾಜ್ ಹಳವರ, ಪ್ರಶಾಂತ, ಶಿಕ್ಷಕರಾದ ಸಿದ್ದು ಹೊರನಟ್ಟಿ ಮಲ್ಲನಗೌಡ ಗೌಡರ, ಭೀಮೇಶ್, ವೀರೇಶ ಅಂಗಡಿ, ನಾಗರತ್ನ ಕಡ್ಡಿ, ಪ್ರಸನ್ನ ಪಟ್ಟಣಶೆಟ್ಟರ್, ಜಯಶ್ರೀ ಆದಿ, ಶೃತಿ ಮಂಗಳೂರ, ರೇಣುಕಾ ಮಡಿವಾಳರ, ನವೀನ, ದೀಪಾ ಉಪ್ಪಿನ, ಲಕ್ಷ್ಮೀ ಓದಸೂರಮಠ, ಪ್ರವೀಣ್ ಹೊಸಮನಿ, ಸೈರಾ, ದೊಡ್ಡೇಶ್ ವಿವೇಕಿ, ಶಾರದಾ ಅಂಬೋರೆ ಇನ್ನಿತರರು ಹಾಜರಿದ್ದರು.
Post a Comment

Post a Comment