ಗಜೇಂದ್ರಗಡ : ( Feb_17_2024)
ಬಂಜಾರ ಸಮುದಾಯದ ಮುನ್ನುಡಿ ಬರೆದಿದ್ದು, ಮೊದಲ ಧರ್ಮ ಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರು. ಕಾಡು ಮೇಡುಗಳಲ್ಲಿ ವಾಸವಾಗಿ ತಮ್ಮಜೀವನ ಕಂಡುಕೊಂಡಿರುವ ಹಿಂದುಳಿದ ಸಮುದಾಯ ಅಂದ್ರೆ ತಪ್ಪಾಗಲ್ಲ. ಜೊತೆಗೆ, ಇಂದಿಗೂ ಕೂಡ ಸಮಾಜದಲ್ಲಿ ಕೆಲವರು ಮಾತ್ರ ರಾಜಕೀಯವಾಗಿ, ಆರ್ಥಿಕವಾಗಿ ಸದೃಢರಾಗಿದ್ದಾರೆ ವಿನಹ ಎಲ್ಲರೂ ಅಲ್ಲ. ಆದರೂ, ಕರ್ನಾಟಕದಲ್ಲಿ ಬಂಜಾರ ಸಮಯದಾಯಕ್ಕೆ ತನ್ನದೆ ಆದ ಪ್ರಾತಿನಿಧ್ಯ ನೀಡಲಾಗಿದೆ. ಈ ಎಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು, ಕನ್ನಡ ಸಾಹಿತ್ಯ ಪರಿಷತ್ ಬಂಜಾರ ಸಮಯದಾಯದ ಶ್ರೀ ಸಂತ ಸೇವಾಲಾಲರ ಕೊಡುಗೆ ಸ್ಮರಿಸಲು ಮುಂದಾಗಿದೆ. ಶನಿವಾರ ನಡೆಯುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಕೆ. ಪೂಜಾರ್ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಬಂಜಾರ ಸಮಾಜದ ಹಿರಿಯರು ಮತ್ತು ಬಂಜಾರ ಸಮುದಾಯದ ತಾಲೂಕಾಧ್ಯಕ್ಷರಾದ ಲಾಲಪ್ಪ ರಾಠೋಡ್ ಹಾಗೂ ನಿವೃತ್ತ ಶಿಕ್ಷಕರಾದ ತಾರಾಸಿಂಗ್ ರಾಠೋಡ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎ.ಪಿ ಗಾಣಗೇರ್ ನೇತೃತ್ವದಲ್ಲಿ ನಡೆಯಲಿದೆ.
ಎಸ್.ಎಸ್. ಡೊಳ್ಳಿನ್, ಎ.ಎಸ್.ಕವಡಿಮಟ್ಟಿ, ಶ್ರೀಮತಿ ಭುವನೇಶ್ವರಿ ಅಂಗಡಿ, ಬಿ.ಬಿ ಕುರಿ, ಆರ್. ಕೆ ಬಾಗವಾನ್, ಆರ್. ಜಿ ಮ್ಯಾಕಲ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಗಜೇಂದ್ರಗಡದ ವಾಣಿಪೇಟೆಯ ಗವಿಸಿದ್ದೇಶ್ವರಮಠದಲ್ಲಿ ಫೆಬ್ರವರಿ 17 ರಂದು ಶನಿವಾರ ಸಂಜೆ ಕಾರ್ಯಕ್ರಮ ನಡೆಯಲಿದೆ.
Post a Comment