ಗಜೇಂದ್ರಗಡ: (Feb_26_2024)
ಟಿಪ್ಪು ಸುಲ್ತಾನ್ ದೇಶಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ, ದೇಶಭಕ್ತ ಅವರ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ಗಜೇಂದ್ರಗಡದಲ್ಲಿ ಟಿಪ್ಪು ಸುಲ್ತಾನ್ ಭವನಕ್ಕೆ ಸರ್ಕಾರ ಮುಂದಾಗಬೇಕು ಎಂದು ಟಿಪ್ಪು ಸುಲ್ತಾನ್ ಕಮೀಟಿ ಅಧ್ಯಕ್ಷ ದಾವಲಸಾಬ ತಾಳಿಕೋಟಿ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಪಂಚದ ಚರಿತ್ರೆಯಲ್ಲಿ ತನ್ನ ನಾಡಿನ ರಕ್ಷಣೆಗಾಗಿ ಇಬ್ಬರು ಮಕ್ಕಳನ್ನು ಶತ್ರುವಿಗೆ ಒತ್ತೆ ಇಟ್ಟಿದ್ದು ಮಾತ್ರವಲ್ಲದೆ, ರಣಾಂಗಣದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುತ್ತಲೇ ಮಡಿದ ಏಕೈಕ ದೊರೆ ಟಿಪ್ಪು ಮಾತ್ರ.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನು ಪ್ರೀತಿಸಿದವನು ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಾಗಿರುವ ಟಿಪ್ಪು ಸುಲ್ತಾನ್ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದರು.
ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿದ ದೇಶಭಕ್ತ ಎಂದು ತಿಳಿಸಿದರು. ಜಾತ್ಯತೀತ ನಾಯಕ ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆಯನ್ನು ಎಲ್ಲೆಡೆ ಪ್ರಚಾರ ಪಡಿಸುವ, ಆದರ್ಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಟಿಪ್ಪು ಸುಲ್ತಾನ್ ಅಭಿಮಾನಿಗಳು ಮಾಡಬೇಕಾಗಿದೆ ಆದ್ದರಿಂದ ಸ್ಥಳೀಯ ಶಾಸಕರು ತಮ್ಮ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಭವನ ನಿರ್ಮಾಣಕ್ಕೆ ಮುತುವರ್ಜಿ ವಹಿಸಿ ಸರ್ಕಾರಕ್ಕೆ ಒತ್ತಡ ಹೇರುವಂತೆ ಟಿಪ್ಪು ಸುಲ್ತಾನ್ ಭವನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
Post a Comment