-->
Bookmark

Gajendragad : ಮಾಧ್ಯಮ ಕ್ಷೇತ್ರಕ್ಕೆ ಗಣೇಶನ "ಗಣ ಕರ್ನಾಟಕ" ವೈಭವ

Gajendragad : ಮಾಧ್ಯಮ ಕ್ಷೇತ್ರಕ್ಕೆ ಗಣೇಶನ "ಗಣ ಕರ್ನಾಟಕ" ವೈಭವ 

ಗಜೇಂದ್ರಗಡ : (may_05_2026)

ಪಟ್ಟಣದಲ್ಲಿ ಹುಟ್ಟಿ ಬೆಳೆದ ಯುವಕನೋರ್ವ ಹೋರಾಟದೊಂದಿಗೆ ಗುರುತಿಸಿಕೊಂಡು ಈಗ ಮಾಧ್ಯಮ ಲೋಕದಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. 

ಬಂಜಾರ ಸಮುದಾಯದ ಬಡ ಮಧ್ಯಮ ಕುಟುಂಬದಲ್ಲಿ ತಂದೆ ರಾಮಜಪ್ಪ ಗುಗಲೋತ್ತರ್ ತಾಯಿ ಕಾಳಮ್ಮ ಗುಗಲೋತ್ತರ್ ಅವರಿಗೆ 7ನೇ ಮಗುವಾಗಿ ಜನಿಸಿದರು‌. ಜೂನ್ 3 ರಂದು 1989 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 4 ರಲ್ಲಿ ಮತ್ತು ಹೈಸ್ಕೂಲ್  ಮತ್ತು ಕಾಲೇಜು ಶಿಕ್ಷಣವನ್ನ  ಪ್ರತಿಷ್ಠಿತ ಎಸ್.ಎಂ‌ ಭೂಮರಡ್ಡಿಯಲ್ಲಿ ಪಡೆದರು. 

ಪಟ್ಟಣದಲ್ಲಿನ ಕೆಲ ಜ್ವಲಂತ ಸಮಸ್ಯೆಗಳನ್ನ ನೋಡುತ್ತಾ, ಹೋರಾಟದ ಕಿಚ್ಚು ಎದೆಯಲ್ಲಿ ಮೊಳಗಿಸಿಕೊಂಡು ಬಾಲ್ಯದಿಂದಲೇ ಶಿಕ್ಷಣದಿಂದ ವಂಚಿತರಾದವರನ್ನು ಶಿಕ್ಷಣ ಪಡೆಯುವಂತೆ ಪ್ರೇರೇಪಿಸುತ್ತ, ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುತ್ತ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಹುಡುಗ ಕರ್ನಾಟಕ ಜನಪರ ಸೇವಾ ಸಮಿತಿ ಸಂಘಟನೆಯನ್ನ ಕಟ್ಟಿ ಬೆಳೆಸಿದ. ಮತ್ತು ವಿಶ್ವಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋದ ರಾಜ್ಯಾಧ್ಯಕ್ಷರೂ ಹೌದು.‌ ಹೀಗೆ ಸಮಾಜ ಸುಧಾರಣೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಬಂಜಾರ ಸಮುದಾಯದ ಮುಂಚೂಣಿ ನಾಯಕರೂ ಆಗಿರುವ ಗಣೇಶ್ ಗುಗಲೋತ್ತರ್, ಮಾಧ್ಯಮದಿಂದ ಸಮಾಜದ ಸುಧಾರಣೆ ಆಗುತ್ತದೆ ಎಂದರಿತು. ಮಾಧ್ಯಮ ಕ್ಷೇತ್ರದಲ್ಲೂ ಹೊಸ ಮೈಲಿಗಲ್ಲಿಗೆ  ಸಾಕ್ಷಿಯಾಗಿದ್ದಾರೆ. 

ಸದಾ ಸಮಾಜ ಸುಧಾರಣೆ ಬಗ್ಗೆ ಚಿಂತಿಸುವ ಧೀಮಂತ ನಾಯಕ ಎಂದೆ ಬಿಂಬಿತರಾಗಿರುವ ಕರ್ನಾಕಟ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಗಣೇಶ್ ಅವರ ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು, ಮಗದಷ್ಟು ಬೆಳೆಯಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಗಣೇಶ್ ಗುಗಲೋತ್ತರ್ ಅವರು ಇದೇ  ಮೇ 22 ರಂದು ಬೆಂಗಳೂರಿನಲ್ಲಿ ಗಣ ಕರ್ನಾಟಕ ಪಾಕ್ಷಿಕ ಪತ್ರಿಕೆ ಉದ್ಘಾಟನಾ ಸಮಾರಂಭ ಮತ್ತು ಕರ್ನಾಟಕ‌ ಜನಪರ ಸೇವಾ ಸಮಿತಿ ದಶಮಾನೋತ್ಸವ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಪ್ರಶಸ್ತಿ ಸಮಾರಂಭವನ್ನ ರವೀಂದ್ರ ಕಲಾಕ್ಷೇತ್ರ, ನಯನಾ ರಂಗಮಂದಿರ ಬೆಂಗಳೂರು ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

ಇನ್ನೂ, ಹಿರಿಯ ಚಿಂತಕ, ಪ್ರೊಫೆಸರ್‌ ಮತ್ತು ಗಜೇಂದ್ರಗಡ ಪಟ್ಟಣದ ಪತ್ರಕರ್ತರ ಪಿತಾಮಹ ಎನ್ನಲಾಗುವ ಬಿ.ಕೆ ಮಾದಿ ಅವರ "ಹೃದಯ ಗೀತೆ" ಕವನ ಸಂಕಲನ‌ ಲೋಕಾರ್ಪಣೆಯೂ ನಡೆಯಲಿದೆ. 
Post a Comment

Post a Comment