ಗಜೇಂದ್ರಗಡ : (Jun_10_2026)
ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಪಟ್ಟಣದಲ್ಲೊಬ್ಬರು ಗೋರಂಟಿ ಕಲಾವಿದೆಯೊಬ್ಬರಿದ್ದಾರೆ. ತರಹೇವಾರಿ ಮೆಹಂದಿ ಡಿಸೈನ್ ಮಾಡುತ್ತಾರೆ. ಮದುವೆ ಸಮಾರಂಭಗಳಿಗೆ ಹೆಚ್ಚಾದ ಬೇಡಿಕೆಗಳಿಗೆ ಅನುಗುಣವಾಗಿ ಮೆಹೆಂದಿ ಹಾಕುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮೆಹಂದಿ ತನ್ನದೇ ಪರಂಪರೆ ಹೊಂದಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮಹಿಳೆಯರನ್ನ ಮನೆಯಿಂದ ಹೊರ ಕಳಿಸುವುದಿಲ್ಲ ಎಂಬ ಅಪವಾದ ವಿದೆ. ಆದ್ರೆ, ಅಬ್ದುಲಸಾಬ್ ನಾಲಬಂದ್ ಮತ್ತು ಶಂಶಾದ್ ಬೇಗಂ ಅವರಿಗೆ ಐವರು ಹೆಣ್ಣುಮಕ್ಕಳು ಅವರಲ್ಲಿ ಕೊನೆಯವರೇ ಕುಮಾರಿ ತಂಜಿಲಾ ನಾಲಬಂದ್.
ಬಡ ಕುಟುಂಬದಲ್ಲಿ ಜನಿಸಿದರೂ, ಅಣ್ಣ ಖಾಜೆಸಾಬ್ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾರೆ. ಅತ್ತಿಗೆ ಹಸಿನಾ ಅವರು ಸಹ ನಮ್ಮನ್ನ ಚೆನ್ನಸಗಿ ನೋಡಿಕೊಳ್ಳುತ್ತಾರೆ ಎಂದು ಕುಮಾರಿ ತಂಜಿಲಾ ನಾಲಬಂದ್ ತಮ್ಮ ಮನದಾಳ ಹಂಚಿಕೊಂಡರು.
ಮೆಹಂದಿ ಹಾಕಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೂ ತೆರಳುತ್ತಾರೆ. ಈ ಉದ್ಯೋಗದಲ್ಲಿ ಆದಾಯವೂ ಇದೆ. ಆದ್ರೆ, ಸ್ಥಳಿಯವಾಗಿ ಬೇಡಿಕೆ ಕಡಿಮೆ ಎಂದು ತಂಜಿಲಾ ಹೇಳಿದಾರೆ.
ಪಟ್ಟಣದಲ್ಲಿ ಮುಸ್ಲೀಂ ಸಮುದಾಯ ಬಹಳಷ್ಟು ಮುಂದೂವರೆದಿದೆ. ಪಟ್ಟಣದಲ್ಲಿ ಎಲ್ಲ ಸಮುದಾಯದವ್ರು ಅಷ್ಟೆ ಬಾಂಧವ್ಯದಿಂದ ಇದ್ದೇವೆ ಎಂದು ಸಲಕ ಸಮುದಾಯದ ಸೋದರತ್ವವನ್ನ ಕೊಂಡಾಡಿದರು. ಇನ್ನು, ನಾಲಬಂದ್ ಕುಟುಂಬ ಸಹ ಎಲ್ಲ ಸಮುದಾಯದೊಂದಿಗೆ ಬೆಳೆದಿದ್ದೇವೆ. ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ ಎಂದು ಕುಟುಂಬದ ಕುರಿತು ಮೆಚ್ಚುಗೆ ಮಾತನಾಡಿದ್ರು ಕುಮಾರಿ ತಂಜಿಲಾ....



Post a Comment