ಗಜೇಂದ್ರಗಡ : (Jul_01_2026)
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಆರಂಭವಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲೂ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್ ಗೆ ಆಗಮಿಸಿದ ಬೂತ್ ಲೆವೆಲ್ ಅಧಿಕಾರಿ ಎಸ್.ಟಿ ಜಾಧವ್ ಅವರನ್ನ ಪುರಸಭೆ ಸದಸ್ಯರಾದ ರಾಜೇಸಾಬ್ ಸಾಂಗ್ಲೀಕರ್ ಸನ್ಮಾನಿಸಿದರು. ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆಗೆ ವಾರ್ಡಿನ ಸಮಸ್ತ ಜನತೆಯ ಸಹಕಾರ ವಿರುತ್ತದೆ ಎಂದು ತಿಳಿಸಿದರು. ಎಸ್.ಐ.ಆರ್ ಪಟ್ಟಿ ಪರಿಷ್ಕರಣೆಯನ್ನ ಅಚ್ಚುಕಟ್ಟಾಗಿ ಮಾಡುವಂತೆ ಮನವಿಯೂ ಮಾಡಿದರು. ಯಾವ ಮತದಾರರು ವಂಚಿತರಾಗಬಾರದು ಎಂದು ತಿಳಿಸಿದರು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಸಾಂಗ್ಲೀಕರ್ ಅವರು, ಜನಸೇವೆಗೆ ಮೊದಲ ಆದ್ಯತೆ ನೀಡುತ್ತಾರೆ. ಯುವಕರಿಗೂ ಅಚ್ಚುಮೆಚ್ಚಿನ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.



Post a Comment