-->
Bookmark

Bagalakote : ವೈದ್ಯರ ಸೇವೆ ಗುರುತಿಸಿ ಕೃತಜ್ಞತೆ ಸಲ್ಲಿಸುವ ದಿನ, ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯ : ಡಾ. ಉಮ್ಮಲ್ ಶೇಖ್ ಅಭಿಪ್ರಾಯ

Bagalakote : ವೈದ್ಯರ ಸೇವೆ ಗುರುತಿಸಿ ಕೃತಜ್ಞತೆ ಸಲ್ಲಿಸುವ ದಿನ, ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯ : ಡಾ. ಉಮ್ಮಲ್ ಶೇಖ್ ಅಭಿಪ್ರಾಯ 

ಬಾಗಲಕೋಟೆ : ( Jul_01_2026)
ತಮ್ಮ ಜೀವದ ಹಂಗು ತೊರೆದು ರೋಗಿಗಳನ್ನು ಗುಣಪಡಿಸುವ ವೈದ್ಯರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ ಕೃತಜ್ಞತೆ ಸಲ್ಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ವೈದ್ಯರಾದ ಡಾ. ಉಮ್ಮಲ್ ಶೇಖ್ ಹೇಳಿದರು. ಬಾಗಲಕೋಟೆಯ ನವನಗರದ  ಸೆಕ್ಟರ್ ನಂಬರ್ 3ರಲ್ಲಿ ತೋರಗಲ್ ಮೆಡಿಕಲ್‌ ಮತ್ತು ಕ್ಲಿನಿಕ್ ನಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಕೆಲವೆಡೆ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ವೆ. ವೈಧ್ಯರು ತಮ್ಮ ಜೀವವನ್ನೆ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತೇವೆ. ವೈದ್ಯರ ಕೆಲಸ ಕಾರ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ವಿದೆ ಎಂದು ಡಾ. ಉಮ್ಮಲ್ ಶೇಖ್ ಅಭಿಪ್ರಾಯ ವ್ಯಕ್ತಪಡಿಸಿದರು. 

ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕೆಕ್ ಕತ್ತರಿಸಿ ಶುಭ ಕೋರಲಾಯ್ತು. 
ಈ ಸಂಧರ್ಭದಲ್ಲಿ ಕುಮಾರಿ ಬಿಸ್ಮಿಲ್ಲಾ ,  ಫಾರುಕ್ ನಾಯ್ಕೋಡಿ, ಫೈಜಲ್  ನಾಯ್ಕೋಡಿ , ತೋರಗಲ್ ಮೆಡಿಕಲ್ ನ ಮಾಲೀಕರಾದ ರಫಿಕ್ ತೋರಗಲ್, ಫಯಾಜ್ ತೋರಗಲ್, ಮೌನೇಶ್ ವಿಶ್ವಬ್ರಾಹ್ಮಣ ಉಪಸ್ಥಿತರಿದ್ದರು.

ಜಾಹಿರಾತು
Post a Comment

Post a Comment