Gajendragad : ದ್ವಿತೀಯ ಪಿಯುಸಿ ಫಲಿತಾಂಶ ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಗಜೇಂದ್ರಗಡ : (Apr_09_2026)
ನಗರದ ಜಗದ್ಗುರು ತೋಂಟದಾರ್ಯ ವಿಜ್ಞಾನ ಹಾಗೂ ವಾಣಿಜ್ಯ ಪಿ.ಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಲಕ್ಷ್ಮೀ ದ್ಯಾವನಕೊಂಡಿ 96% ಮತ್ತು ರಾಹುಲ್ ನಾವಡೆ 96% ಪ್ರಥಮ ಸ್ಥಾನ, ರಾಘವೇಂದ್ರ ಚಲಮಲ್ 94.83% ದ್ವಿತೀಯ ಸ್ಥಾನ ಮತ್ತು ಲಕ್ಷ್ಮೀ ಅವಧೂತ 93% ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪವನಕುಮಾರ ಬನ್ನಿಕೊಪ್ಪ 94% ಪ್ರಥಮ ಸ್ಥಾನ, ಭೂಮಿಕಾ ರಾಯಬಾಗಿ 93.16% ದ್ವಿತೀಯ ಸ್ಥಾನ ಹಾಗೂ ಭೀಮವ್ವ ಹಿರೇಹಾಳ 88% ತೃತೀಯ ಸ್ಥಾನ ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 108 ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 03 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ಕಾಲೇಜಿನ ಒಟ್ಟು ಫಲಿತಾಂಶ 82% ರಷ್ಟಾಗಿದೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ತೋಂಟದ ಸಿದ್ಧರಾಮಸ್ವಾಮಿಜಿ, ಕಾರ್ಯದರ್ಶಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಪ್ರಾಚಾರ್ಯ ಸಂಗಮೇಶ ಬಾಗೂರ ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.



Post a Comment