-->
Bookmark

Gadag ( varavi ) : ಶ್ರೀ ವೇದಮೂರ್ತಿ ಬ್ರಹ್ಮಶ್ರೀ ಶ್ರೀಶೈಲಾಚಾರ್ ಹೆಚ್. ಪುರೋಹಿತ್ ಅವರ ವೈಕುಂಠ ಸಮಾರಾಧನೆ : ಸಕಲ ಸದ್ಭಕ್ತರಿಗೆ ಆಹ್ವಾನ

Gadag ( varavi ) : ಶ್ರೀ ವೇದಮೂರ್ತಿ ಬ್ರಹ್ಮಶ್ರೀ ಶ್ರೀಶೈಲಾಚಾರ್ ಹೆಚ್. ಪುರೋಹಿತ್ ಅವರ ವೈಕುಂಠ ಸಮಾರಾಧನೆ : ಸಕಲ ಸದ್ಭಕ್ತರಿಗೆ ಆಹ್ವಾನ 

ಗದಗ : ವರವಿ : (Jul_29_2026)
ವಿಶ್ವಕರ್ಮ ಸಮಾಜದ ಹಿರಿಯರಾದ ಪೂಜ್ಯ. ಶ್ರೀ ವೇದಮೂರ್ತಿ ಬ್ರಹ್ಮಶ್ರೀ ಶ್ರೀಶೈಲಾಚಾರ್ ಹೆಚ್. ಪುರೋಹಿತ್ (ವರವಿ) ಅವರ ವೈಕುಂಠ ಸಮಾರಾಧನೆ ನಡೆಯಲಿದೆ. ಆಗಸ್ಟ್ 1 ರ ಶನಿವಾರ ವರವಿಯ ತಮ್ಮ ಸ್ವಗ್ರಹದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಜುಲೈ 21 ರಂದು ಹಿರಿಯ ಸ್ವಾಮಿಜಿ ಸಾಯುಜ್ಯ ಹೊಂದಿದ್ದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ವೈಕುಂಠ ಸಮಾರಾಧನೆಯಲ್ಲಿ ಭಾಗವಹಿಸುವಂತೆ ಶ್ರೀಗಳ ಪುತ್ರರಾದ ಶ್ರೀ. ವೇ. ಬ್ರಹ್ಮ ಹನುಮಂತಾಚಾರ್ಯ ಮತ್ತು ಶ್ರೀ ವೇ. ಬ್ರಹ್ಮ ಮಹೇಶಾಚಾರ್ಯರು ತಿಳಿಸಿದ್ದಾರೆ. ಕುಟುಂಬಕ್ಕೆ ಸ್ವಾಂತ್ವನ ಕೋರಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಲಿದ್ದಾರೆ. 

ದಿನಾಂಕ: 01-08-2026, ಶನಿವಾರ
ಸಮಯ: ಮಧ್ಯಾಹ್ನ 12-45 ಕ್ಕೆ
ಸ್ಥಳ: ಶ್ರೀ ಕ್ಷೇತ್ರ ವರವಿಯ ಅವರ ಸ್ವಗೃಹದಲ್ಲಿ
"ಶ್ರೀಯುತರ ವೈಕುಂಠ ಸಮಾರಾಧನೆಯ ಈ ಪುಣ್ಯ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ದುಃಖತಪ್ತರಾದ ಕುಟುಂಬದವರು ಹಾಗೂ ಸಮಾಜದ ಬಾಂಧವರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
Post a Comment

Post a Comment