ಬಾಗಲಕೋಟೆ : (Feb_22_2026)
ಒಂದೆಡೆ ಬಾಗಲಕೋಟೆಯಲ್ಲಿ ಭಾವೈಕ್ಯತೆಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿದ್ರೆ, ಮತ್ತೊಂದೆಡೆ, ಲೋಕ ಕಲ್ಯಾಣಕ್ಕಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ನಗರದ ಸೆಕ್ಟರ್ ನಂಬರ್ 12 ರಲ್ಲಿ ತಿಪ್ಪಣ್ಣ ಅಂಬಾಜಿ ಸುಗತೇಕರ್ ಅವರ ಮನೆಯಲ್ಲಿ ತಾಯಿ ತುಳಜಾ ಭವಾನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಾಗಲಕೋಟೆಯಲ್ಲಿ ನಡೆದ ಘಟನೆ ಅಂತ್ಯ ಕಾಣಲಿ ಮತ್ತು ಲೋಕ ಕಲ್ಯಾಣವಾಗಲಿ ಎಂದು ತುಳಜಾ ಭವಾನಿ ದೇವರಿಗೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದರು. ಜಗದಂಬೆಯಿಂದ ಲೋಕಕ್ಕೆ ಒಳಿತಾಗಲಿದೆ ಎಂದು ತಿಪ್ಪಣ್ಣ ಅಂಬಾಜಿ ಹೇಳಿದರು. ನಾಡಿನಲ್ಲಿ ಅಶಾಂತಿ ತೊಲಗಿ ಶಾಂತಿ ನೆಲೆಸಲಿ, ಸಮೃದ್ಧಿ ತರಲಿ ಎಂದು ಬೇಡಿಕೊಂಡಿದ್ದೇವೆ. ನಂಬಿದವರ ಕೈ ಬಿಡದ ತಾಯಿ ಜಗದಂಬೆ ಲೋಕಕ್ಕೆ ಹಿತವ ತರುವಳು ಎಂದರು.
ಮನೆಯಲ್ಲೆ ನಡೆದ ಪೂಜೆಯಲ್ಲಿ ಕುಟುಂಬ ಸದಸ್ಯರು, ಓಣಿಯ ಗುರು ಹಿರಿಯರು ಭಾಗವಹಿಸಿದ್ದರು. ಬಾಗಲಕೋಟೆ ನಗರಕ್ಕೆ ತಗುಲಿದ ಕಳಂಕ ದೂರವಾಗಲಿದೆ ಎಂದು ಅಂಬಾಜಿ ವೆಂಕಪ್ಪ ಸುಗತೇಕರ್
ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.



Post a Comment