ಬ್ಯುರೊ : (Apr_25_2026)
ಪ್ರತ್ಯುಷ್ ಪತ್ತಾರ್ ಅವರು ಸಹ 613 ಅಂಕ ಪಡೆದು 98. 08 ಪ್ರತಿಶತದೊಂದಿಗೆ ತೇರ್ಗಡೆ ಯಾಗಿದ್ದು, ತಂದೆ ರಮೇಶ್ ಪತ್ತಾರ್ ಸಂತಸ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಹೆಚ್ಚಿನ ಒತ್ತಡ ನೀಡದಿರುವುದರಿಂದ ಹೆಚ್ಚಿನ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ರಮೇಶ್ ಪತ್ತಾರ್ ಮಗನ ಸಾಧನೆಯನ್ನ ಕೊಂಡಾಡಿದ್ದಾರೆ.
ಇನ್ನು,
ರಾಯಚೂರು ಜಿಲ್ಲೆಯ ಸಿಂಧನೂರಿನ ಕಿತ್ತೂರ ರಾಣಿ ಚೆನ್ನಮ್ಮ ರೆಸಿಡೆನ್ಸಿಯಲ್ ವಿದ್ಯಾರ್ಥಿನಿ ಹರ್ಷಿತಾ ಆರ್ ಪತ್ತಾರ್ 566 ಅಂಕದೊಂದಿಗೆ ಶೇಕಡಾ 90% ಪಡೆದಿದ್ದಾರೆ. ತಂದೆ ರವಿಕುಮಾರ್ ಮತ್ತು ತಾಯಿ ಭಾರತಿ ರವಿಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮಗಳ ಮುಂದಿನ ಭವಿಷ್ಯಕ್ಕೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.
ಈ ಮಧ್ಯೆ,
ಬೆಳಗಾವಿಯ ಚಿಕ್ಕೊಡಿ ಪಟ್ಟಣದ ಶ್ರೀ ಎನ್ ವೈ ಕಿವದ್ ಶಾಲೆಯ ವಿದ್ಯಾರ್ಥಿನಿ ಆಶ್ಲೇಷಾ ನಾಗೇಂದ್ರ ಶಿರಾಳ್ಕರ್ 565 ಅಂಕಗಳೊಂದಿಗೆ ಪಾಸಾಗಿದ್ದು, ಬಡತನದಲ್ಲಿ ಅರಳಿದ ಪ್ರತಿಭೆಯಾಗಿದೆ. ಶೇಕಡಾ 90.4 % ಪ್ರತಿಶತ ವಾಗಿದ್ದು, ತಂದೆ ನಾಗೇಂದ್ರ ಶಿರಾಳ್ಕರ್ ಮತ್ತು ತಾಯಿ ಲಕ್ಷ್ಮೀ ಶಿರಾಳ್ಕರ್ ಮತ್ತು ಕುಟುಂಬ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.



Post a Comment