ಗಜೇಂದ್ರಗಡ : (May_06_2026)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ರಸ್ತೆಗಳು ಹಾಳಾಗಿದ್ದು, ದುರಸ್ತಿ ಕಾರ್ಯ ನಡೆಸಬೇಕು. ಪಟ್ಟಣದಲ್ಲಿ ಸಂಚರಿಸುವ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ತಾಲೂಕಾಧದಯಕ್ಷ ಮಹಮ್ಮದಗೌಸ್ ಅಕ್ಕಿ ನೇತೃತ್ವಸಲ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆ ತಾಲೂಕಾಧ್ಯಕ್ಷ ಮಹಮ್ಮದಗೌಸ್ ಅಕ್ಕಿ, ಪುರಸಭೆಯಿಂದ ದುರಸ್ತಿ ಕಾರ್ಯ ನಡೆಯಬೇಕು. ರಸ್ತೆಗಳು ಹಾಳಾಗಿವೆ. ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಹೃದಯ ಭಾಗದಲ್ಲೇ ರಸ್ತೆಗಳು ಹಾಳಾಗಿವೆ. ಸಂಬಂಧ ಪಟ್ಟ ಇಲಾಖೆ ಇತ್ತ ಹರಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸುದರು.
ಜಯ ಕರ್ನಾಟಕ ಸಂಘಟನೆಗೆ ಆಟೋ ಚಾಲಕರ ಸಂಘಟನೆ ಸಾತ್ ನೀದಿದೆ.
ಈ ವೇಳೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಶರಣಪ್ಪ ಹೂಗಾರ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ರಾಣೋಜಿ ಕಲಾಲ್, ಆಟೋ ಚಾಲಕರ ಸಂಘದ ಕಾರ್ಯದರ್ಶಿ ಗಣೇಶ್ ರಾಠೋಡ್, ಆಟೋ ಚಾಲಕರ ಸಂಘದ ಖಜಾಂಚಿ
ರಾಜು ತಟಗಾರ್, ಸಂಘದ ಸದಸ್ಯರಾದ ಆನಂದ್ ಕಲಾಲ್, ವಿರುಪಾಕ್ಷಿ ಶೇಟ್ಟರ್, ಬಸವರಾಜ್ ಗಂಜಿ,
ರಾಜು ಬೊಸಲೆ, ರಮೇಶ್ ಕಲಾಲ್, ಮತ್ತು ಜಯ ಕರ್ನಾಟಕ ಸಂಘಟನೆ ಸದಸ್ಯರಾದ ಹನುಮಂತ್ ಜಿಗೇರಿ, ಆರೀಫ್ ಕಟ್ಟಿಮನಿ, ರಮೇಶ್ ತಳವಾರ್, ಗಣೇಶ್ ಮುದಗಲ್ಲ, ಸಾಧೀಕ್ ಮೊಮಿನ್, ಮಹೇಶ್ ಮಾಳೋತ್ತರ್, ಸಾಧೀಕ್ ಡಾಲಾಯತ್,
ರಾಘವೇಂದ್ರ ಹೂಗಾರ್, ರವಿ ಬಂದನವರ್, ಶಿವು ಗಡಗಿ, ಸಾಧೀಕ್ ಮನಿಯಾರ್, ಇಬ್ರಾಹಿಂ ಅ, ಆನಂದ ಸೂಡಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.



Post a Comment