ಕಾರವಾರ : (Jun_12_2026)
ಕಾರವಾರದ ಪ್ರತಿಷ್ಠಿತ ಬಾಲಮಂದಿರ ಶಾಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ ಅಕ್ಕ ಪಡೆಯಿಂದ ಮಕ್ಕಳಿಗೆ ಜಾಗೃತಿ ಮೂಡಿಸಲಾಯ್ತು. ಅಕ್ಕ ಮಹಿಳಾ ಪೊಲೀಸ್ ಪಡೆಯಿಂದ ಸರಸ್ವತಿ ಚಹ್ವಾಣ್, ಶೃತಿ ಸಾವಂತ್, ಲತಾ ನಾಯ್ಕ್ ಮೂವರು ಸಿಬ್ಬಂದಿಗಳು ಹಾಜರಿದ್ದರು. ಬಾಲಮಂದಿರ ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಅಂಜಲಿ ಮಾನೆ ಜೊತೆಗಿದ್ದರು.
ಬಾಲಮಂದಿರ ಶಾಲೆಯ ಸಭಾಂಗಣದಲ್ಲಿ ವಿವಿಧ ತರಗತಿಯ ವಿದ್ಯಾರ್ಥಿಗಳು ಹಾಜರಿದ್ದರು. ಈ ವೇಳೆ ಮಾತನಾಡಿದ ಅಕ್ಕ ಪಡೆಯ ಸಿಬ್ಬಂದಿಗಳು ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ, ಮಹಿಳಾ ಸಹಾಯವಾಣಿ, ಪೊಲೀಸ್ ಸಹಾಯವಾಣಿ, ಸೈಬರ್ ಕ್ರೈಮ್, ಪೊಕ್ಸೊ ಕಾಯ್ದೆಗೆ ಸಂಭಂದಿಸಿದಂತೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
Good Touch, Bad Touch ಸೇರಿದಂತೆ ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ ಯಾರಾದರೂ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರೇ, ನಿಮ್ಮ ನಿಮ್ಮ ಶಾಲಾ ಶಿಕ್ಷಕರ ಗಮನಕ್ಕೆ ತನ್ನಿ, ಮತ್ತು ಮನೆಯಲ್ಲಿ ಪಾಲಕರ ಗಮನಕ್ಕೂ ತರಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹಲವೆಡೆ ವಿದ್ಯಾರ್ಥಿನಿಯರ ಮೇಲೆ ದುರ್ವರ್ತನೆಯ ಹೆಚ್ಚಾಗಿದ್ದು, ಇದೆಲ್ಲವನ್ನ ತಡೆ ಗಟ್ಟುವಲ್ಲಿ ನಾವು ಸದಾ ಸನ್ನದ್ಧರಾಗಿದ್ದೇವೆ ಎಂದರು.
ಅಕ್ಕ ಪಡೆ ಎನ್ನುವುದು ಕರ್ನಾಟಕ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಜಾರಿಗೆ ತಂದಿರುವ ಒಂದು ವಿಶೇಷ ಮಹಿಳಾ ಸುರಕ್ಷತಾ ಪಡೆಯಾಗಿದೆ.
ಅಕ್ಕ ಪಡೆಯ ಉದ್ದೇಶ :
ಸಾರ್ವಜನಿಕ ಸ್ಥಳಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹಗಳನ್ನು ತಡೆಯುವುದಾಗಿದೆ.
ಈ ಪಡೆಯು ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಮಹಿಳಾ ಗೃಹರಕ್ಷಕ ದಳದವರನ್ನು ಒಳಗೊಂಡಿರುತ್ತದೆ.
ಇವರು ತಂಡಗಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತಾರೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಧೈರ್ಯ ತುಂಬುವುದು, ಉಚಿತ ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ (counselling) ನೀಡುವುದು ಇವರ ಪ್ರಮುಖ ಜವಾಬ್ದಾರಿಯಾಗಿದೆ.
ನಿಮಗೆ ಅಥವಾ ನಿಮ್ಮ ಸುತ್ತಮುತ್ತಲಿನ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಸಹಾಯ ಅಗತ್ಯವಿದ್ದರೆ, ಈ ಕೆಳಗಿನ ಸಹಾಯವಾಣಿಗಳಿಗೆ ಕರೆ ಮಾಡಬಹುದು..
ತುರ್ತು ಸಹಾಯವಾಣಿ: 112
ಮಹಿಳಾ ಸಹಾಯವಾಣಿ: 181
ಮಕ್ಕಳ ಸಹಾಯವಾಣಿ: 1098



Post a Comment