ವೈದ್ಯಕೀಯ ವೃತ್ತಿಯಲ್ಲಿ
ಜನಸೇವೆ ಮಾಡುವ ಮನೆಯ ಮಹಾಲಕ್ಷ್ಮೀ
ಬಾಗಲಕೋಟೆ : (Jul_24_2026)
ಕುಮಾರಿ ಜ್ಯೋತಿ ಮಲಕಜಪ್ಪ ಮೊಕಾಶಿ ಈ ಹೆಸರು ಬಾಗಲಕೋಟೆಯ ಕಟಗೇರಿಯಲ್ಲಿ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ ಇವರು ಜಿಲ್ಲೆಯಲ್ಲೆ ಹೆಸರಾಂತ ತೊಟ್ಟಿಲು ಶಿರೂರ ಹೆರಂಜಲ್ ಹೆರಿಗೆ ಮತ್ತು ಪ್ರಸೂತಿ ಆಸ್ಪತ್ರೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ.
ತಂದೆ ತಾಯಿಗೆ ಅಚ್ಚುಮೆಚ್ಚಿನ ಮಗಳಾಗಿ ಕುಟುಂಬಕ್ಕೆ ಆಸರೆಯಾಗಿ ಬೆನ್ನೆಲುಬಾಗಿ ಹಗಲು ರಾತ್ರಿ ಶ್ರಮ ಪಡುತ್ತಾರೆ. ಕಲಿತ ವಿದ್ಯೆ ಮರೆಯಬಾರದು ಜೀವನವೇ ಒಂದು ಕಲಿಕಾ ಪಾಠಶಾಲೆಯಂತೆ ಎಂದು ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆ, ಕಾಳಜಿಯನ್ನ ಹೊಂದಿದ್ದಾರೆ.
ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಇವರು ಜೊತೆಯಲ್ಲಿ ಕೆಲಸ ಮಾಡುವ ಸಿಸ್ಟರ್, ಬ್ರದರ್ ಗಳಿಗೆ ಅಚ್ಚು ಮೆಚ್ಚು. ಇತರರು ತಪ್ಪು ಮಾಡಿದ್ರೆ, ಮಾತ್ರ ಅವರೆಲ್ಲರಿಗೂ ಸಿಂಹ ಸ್ವಪ್ನವಾಗಿ ಕಾಡುತ್ತಾರೆ.
ಬೇರೆಡೆಯಿಂದ ಬರುವ ರೋಗಿಗಳಿಗೂ ಅಚ್ಚು ಮೆಚ್ಚು ಕುಮಾರಿ ಜ್ಯೋತಿ ಮಲಕಜಪ್ಪ ಮೊಕಾಶಿ ಅವರು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರು ತಮ್ಮೂರಾದ ಕಟಗೇರಿ ಕೀರ್ತಿ ಹೆಚ್ಚಿಸಿದ್ದಾರೆ.
ಮೊದಲು ಪ್ಯಾರಾಮೆಡಿಕಲ್ ಓದಿಕೊಂಡು ಬಳಿಕ ಕೆಲಸ ಮಾಡುತ್ತಲೇ ತಮ್ಮ ಓದನ್ನ ಮುಂದುವರೆಸಿದ ಕುಮಾರಿ ಜ್ಯೋತಿ ಮನೆಯ ಬೆಳಗುವ ದೀಪವಾಗಿದ್ದಾರೆ. ಅಕ್ಕರೆಯಿಂದ ಮಾತನಾಡುವ ಕಲೆಯನ್ನ ಕರಗತ ಮಾಡಿಕೊಂಡಿರುವ ಇವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿ, ಹಿರಿಯ ವೈದ್ಯರ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ. ಮನೆಯ ಮಹಾಲಕ್ಷ್ಮೀ ಎಂದೆ ಕರೆಯುವ ಇವರ ತಾಯಿಯ ಅಚ್ಚುಮೆಚ್ಚಿನ ಮಗಳು. ಇವರು ನಡೆದು ಬಂದ ದಾರಿ ಎಲ್ಲರಿಗೂ ಮಾರ್ಗದರ್ಶಿ. ಅಪಾರ ಗೌರವ ಸಂಪಾದಿಸಿರುವ ಇವರು ಹೊಸದಾಗಿ ಪ್ಯಾರಾಮೆಡಿಕಲ್ ಓದುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೂ ಆದರ್ಶವಾಗಿದ್ದಾರೆ. ತಮ್ಮೂರಿನ ಅದೆಷ್ಟೋ ವಿದ್ಯಾರ್ಥಿಗಳಿಗೆ ಮತ್ತು ಬೇರೆಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನವನ್ನೂ ನೀಡುತ್ತಾರೆ.
ಒಟ್ಟಾರೆಯಾಗಿ ಮಕ್ಕಳಿಗೆ ಪ್ರೀತಿ ತೋರುವ ಕುಮಾರಿ ಜ್ಯೋತಿ ಬಸವಣ್ಣನವರ ಕಾಯಕವೆ ಕೈಲಾಸ ಎಂಬ ಮಾತಿನಂತೆ ಸದಾ ಕೆಲಸ ಮಾಡುವ ಇವರ ಜೀವನ ಇನ್ನಷ್ಟು, ಮಗದಷ್ಟು ಎತ್ತರಕ್ಕೆ ಬೆಳೆಯಲಿ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡಲಿ... ಕರುನಾಡಿನ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸುತ್ತ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಕುಮಾರಿ ಜ್ಯೋತಿ ಅವರಿಗೆ...!



Post a Comment