ಬಾಗಲಕೋಟೆ : (Jul_20_2026)
ಜನರ ಆರೋಗ್ಯ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ವೈದ್ಯೋ ನಾರಾಯಣೋ ಹರಿಃ" ಎಂದರೆ ವೈದ್ಯರು ಸಾಕ್ಷಾತ್ ಭಗವಂತನ (ವಿಷ್ಣುವಿನ) ಸ್ವರೂಪ ಅಂತಾ ಜನರು ನಂಬಿದ್ದಾರೆ. ಅವರಿಗೆ Doctors, Technician, Brothers, Sister ಅಂತಾ ಭಾವಿಸುವುದಿಲ್ಲ. ಬದಲಾಗಿ ಎಲ್ಲರಿಗೂ ವೈದ್ಯರಾಗೆ ಕಾಣುತ್ತಾರೆ ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕರಾದ ಡಾ. ಆನಂದ್ ಝಳಕಿ ಹೇಳಿದರು. ಬಾಗಲಕೋಟೆ ನವನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸಕರ ಕೊಠಡಿಯ ತಂತ್ರಜ್ಞರ ಸಂಘ ಆಯೋಜಿಸಿದ ರಾಷ್ಟ್ರೀಯ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. OT ಯಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಇದೇ ವೇಳೆ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಿರ್ಜಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕರಾದ ಡಾ. ಪ್ರಮೋದ್ ಮಿರ್ಜಿ OT ಮಾತನಾಡಿ, ಕೆಲಸ ಮಾಡುವಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಜಾಣ್ಮೆಯಿಂದ ಕೆಲಸ ಮಾಡಬೇಕು. ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದಾಗ ಯಶಸ್ವಿಯಾಗುತ್ತೇವೆ ಎಂದರು.
ಎಸ್.ಎನ್.ಎಂ ಕಾಲೇಜಿನ ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ಸಿ.ಎಸ್. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಭ್ಯಾಸ, ಕಲಿಕೆ ಒಂದೆಡೆಯಾದ್ರೆ, ಸಮಾಜದ ಕಳಕಳಿಯಿಂದ ಕೆಲಸ ಮಾಡಬೇಕು. ಜೊತೆಗೆ ಸಮಾಜ ಸೇವೆಯೂ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸಂಗಮೇಶ್ ರಕರಡ್ಡಿ, ಡಾ. ಉತ್ತಲಬಾಷಾ ದಂದರಗಿ, ಅನುಷಾ ಮಾಸೂದಿ, ಪ್ರಶಾಂತ್ ಮಾಸೂದಿ, ಪ್ರಕಾಶ್ ಹಳವರ್, ಸುರೇಶಗೌಡ ಪಾಟೀಲ್, ರಾಹುಲ್ ಮಂಗಳೂರ್, ವಿದ್ಯಾಧರ್ ಜಡಿ, ಶಿವಕುಮಾರ್ ಕಂಬಿ , ಅಬ್ದುಲ್‌ಸಾಹೇಬ ಕರ್ನೂಲ್, ಜಿಲ್ಲಾ ಆಪರೇಷನ್ ಥಿಯೇಟರ್ ಟೆಕ್ನಾಲಜೀಸ್ಟ ಅಸೋಸಿಯೇಷನ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ, ಶರಣಪ್ಪ ಶಂಕ್ರಿ ಸೇರಿದಂತೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.



Post a Comment