-->
Bookmark

Gadag : ರೈತರ ಪ್ರತಿಭಟನೆಗೆ ಮಣಿದ ಸರ್ಕಾರ ಮುಂಬರುವ ದಿನಗಳಲ್ಲಿ ಸರ್ಕಾರದ ವೈಫಲ್ಯ ಮುಂದಿಟ್ಟು ಹೋರಾಟಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ : ರವಿ ದಂಡಿನ್

Gadag : ರೈತರ ಪ್ರತಿಭಟನೆಗೆ ಮಣಿದ ಸರ್ಕಾರ 

ಮುಂಬರುವ ದಿನಗಳಲ್ಲಿ ಸರ್ಕಾರದ ವೈಫಲ್ಯ ಮುಂದಿಟ್ಟು ಹೋರಾಟ

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ : ರವಿ ದಂಡಿನ್ 

ಗದಗ : (Sept_24_2026)
ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬಿಜೆಪಿ ಮುಖಂಡ ರವಿ ದಂಡಿನ್ ರೋಣ ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆಗೆ ಸರ್ಕಾರ ಮಂಡಿಯೂರಿದೆ. 

ಸಭಾಧ್ಯಕ್ಷರಾದ ಜಿ.ಎಸ್ ಪಾಟೀಲ್ ತವರಿನಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಬಳಿಕ ಎಚ್ಚೆತ್ತ ಸರ್ಕಾರ ರೋಣ, ಗದಗ, ಮುಂಡರಗಿ ನೂತನವಾಗಿ ಬರ ಪೀಡಿತ ತಾಲೂಕುಗಳನ್ನಾಗಿ ಸರ್ಕಾರ ಘೋಷಣೆ ಮಾಡಿದೆ. ತೀವ್ರ ಬರಗಾಲ ಪಟ್ಟಿಯಲ್ಲಿ ಮೊದಲು ಗಜೇಂದ್ರಗಡ ಮಾತ್ರ ಇತ್ತು. ಈಗ ಮೂರು ತಾಲೂಕುಗಳು ಸೇರ್ಪಡೆಯಾಗಿವೆ.‌ 

ರವಿ ದಂಡಿನ್ ಮತ್ತು ರಾಜ್ಯ ರೈತ ಸಂಘಕ್ಕೆ ಶ್ಲಾಘಿಸಬೇಕಿದೆ.‌ ಸರ್ಕಾರ ನಿರ್ಧಾರದ ಬಳಿಕ ಮಾತನಾಡಿದ ರವಿ ದಂಡಿನ್, ಸರ್ಕಾರ ಛಾಟಿ ಏಟಿನ ಬಳಿಕ ಮಾತ್ರ ಕೆಲಸ ಮಾಡುತ್ತದೆ ಎಂದು ಹರಿಹಾಯ್ದರು.‌ ಸಿಎಂ ಡಿ.ಕೆ ಶಿವಕುಮಾರ್ ಸರ್ಕಾರ ಉತ್ತರ ಕರ್ನಾಟಕವನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಈ ಸರ್ಕಾರಕ್ಕೆ ಕಣ್ಣು, ಮೂಗು, ಬಾಯಿ ಯಾವುದು ಇಲ್ಲ ಎಂದು ಆಕ್ರೋಶ ಹೊರ ಹಾಕಿದರು. 

ರೋಣ ಮತ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದ ವೈಫಲ್ಯಗಳನ್ನ ಮುಂದಿಟ್ಟು ಹೋರಾಟ ಮಾಡುತ್ತೇವೆ ಎಂದು ರವಿ ದಂಡಿನ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
Post a Comment

Post a Comment