ಗೆಲುವಿನ ವಿಶ್ವಾಸ : ರಫೀಕ್ ತೋರಗಲ್
ಗಜೇಂದ್ರಗಡ :
ಪಶ್ಚಿಮ ಪದವಿಧರ ಚುನಾವಣೆಗೆ ಕೊನೆಯ ಕಸರತ್ತು ಜೊರಾಗಿದೆ. ಕಾಂಗ್ರೆಸ್ ಅಭ್ಯರ್ಥಿ
ಮೋಹನ್ ಲಿಂಬಿಕಾಯಿ ಪರ ಕ್ಷೇತ್ರದಲ್ಲಿ ಮತಯಾಚನೆ ನಡೆಸಲಾಯಿತು. ಪಶ್ಚಿಮ ಪದವಿಧರ ಚುನಾವಣೆಯನ್ನ ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಮುಖಂಡ ರಫೀಕ್ ತೋರಗಲ್ ಹೇಳಿದರು. ಕಾರ್ಯಕರ್ತರೊಂದಿಗೆ ಕೊನೆ ದಿನ ಮನೆಮನೆಗೆ ತೆರಳಿ ಪ್ರಚಾರ ಮಡೆಸಿದ ಅವರು ಕಾಂಗ್ರೆಸ್ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಎಲ್ಲೆಡೆ ಒಳ್ಳೆಯ ರೆಸ್ಫಾನ್ಸ್ ಇದೆ. ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಲುವು ನಿಶ್ಚಿತ ಎಂದರು.
ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡದಲ್ಲೂ ಮೊಹನ್ ಲಿಂಬಿಕಾಯಿ ಅವರಿಗೆ ಮತ ಹಾಕಲಿದ್ದಾರೆ. ಪದವಿಧರರ ಹಲವಾರು ಸಮಸ್ಯೆಳಿದ್ದು, ಅವೆಲ್ಲ ಸಮಸ್ಯೆಯನ್ನ ಬಗೆಹರಿಸುವ ಇರಾದೆಯನ್ನ ಲಿಂಬಿಕಾಯಿ ಹೊಂದಿದ್ದಾರೆ. ಪಶ್ಚಿಮ ಪದವಿಧರರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಲಿದೆ ಎಂದು ರಫೀಕ್ ತೋರಗಲ್ ತಿಳಿಸಿದರು.
ರಫೀಕ್ ತೋರಗಲ್ ಅವರೊಂದಿಗೆ ಎಫ್.ಎಸ್ ಕರಿದುರಗನವರ್, ಮಹಮ್ಮದಗೌಸ್ ಅಕ್ಕಿ, ಮುತ್ತಯ್ಯ ಬಿನ್ನಾಳಮಠ, ಇಸ್ಮಾಯಿಲಸಾಬ್, ಮಿರ್ಜಾಗಾಲಿಬ್ ತಾಳಿಕೋಟಿ, ಇರ್ಫಾನ್ ಮನಿಯಾರ್ ಸಾತ್ ನೀಡಿದರು.



Post a Comment