-->
Bookmark

Gajendragad : ರೋಣ ಕ್ಷೇತ್ರದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿರುವ ಜೆಡಿಎಸ್..!ಜೆಡಿಎಸ್ & ಬಿಜೆಪಿ ಒಂದಾಗಿ ಹೋರಾಟ ಮಾಡುವ ಕಾಲ ?..ರಾಜ್ಯ ನಾಯಕರಿಲ್ಲದೇ ಬೆಳೆದ ಮಕ್ತುಮಸಾಬ್ ಮುಧೋಳ್... ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪ್ರತಿಪಕ್ಷವೇ ಇಲ್ಲದಂತಾಗಿದೆ...!

Gajendragad : ರೋಣ ಕ್ಷೇತ್ರದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿರುವ ಜೆಡಿಎಸ್..!

ಜೆಡಿಎಸ್ & ಬಿಜೆಪಿ ಒಂದಾಗಿ  ಹೋರಾಟ ಮಾಡುವ ಕಾಲ ? 

ರಾಜ್ಯ ನಾಯಕರಿಲ್ಲದೇ ಬೆಳೆದ ಮಕ್ತುಮಸಾಬ್ ಮುಧೋಳ್ 
ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪ್ರತಿಪಕ್ಷವೇ ಇಲ್ಲದಂತಾಗಿದೆ...!

ಗಜೇಂದ್ರಗಡ : (Oct_14_2026)
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್, ತಾಲೂಲು ಪಂಚಾಯತ್ ಚುನಾವಣೆ ಮೀಸಲಾತಿ ಪ್ರಕಟ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುಚಟಿಕೆಗಳು ಗರಿಗೆದರಿವೆ. 

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದರೇ, ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ದು ಮತ್ತೊಂದು ನಡೆ. ಬಿಜೆಪಿಗೆ ಸಪೋರ್ಟ್ ಮಾಡಿರುವ ಜೆಡಿಎಸ್ ಕ್ಷೇತ್ರದಲ್ಲಿ ಪ್ರಬಲ್ಯ ಕಳೆದುಕೊಂಡಿದೆ. ಬಿಜೆಪಿ & ಜೆಡಿಎಸ್ ನ ಮಿತ್ರರಂತೆ ವರ್ತನೆ ಕಂಡು ಬರುತ್ತದೆ. ಕ್ಷೇತ್ರದಲ್ಲಿ ಮೂರು ಪಕ್ಷಗಳು ಹೊಂದಾಣಿಕೆಯ ರಾಜಕಾರಣ ಮಾಡುತ್ತವೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಸರ್ವೇ ಸಾಮಾನ್ಯ ಎಂಬಂತಿದೆ. ಈ ಮಾತಿಗೆ ಪುಷ್ಟಿ ನೀಡುವ ಸಂಗತಿಗಳು ಕಣ್ಮುಂದೆ ನಡೆಯುತ್ತಿವೆ. 

ಕ್ಷೇತ್ರದಲ್ಲಿ ಜೆಡಿಎಸ್ ನ ಹಿರಿಯರಾದ ಮಕ್ತುಮಸಾಬ್ ಮುಧೋಳ್ ಕ್ಷೇತ್ರದಲ್ಲಿ ಪಕ್ಷವನ್ನ ಕಟ್ಟಿ ಬೆಳೆಸುವ ಕೆಲಸ ತಮ್ಮ ಹೆಗಲಿಗೇರಿಸಿಕೊಂಡು. ತಮ್ಮ ಸ್ವಂತ ಖರ್ಚಿನಲ್ಲೇ ಪಕ್ಷವನ್ನ ಕಟ್ಟಿ ಬೆಳೆಸುತ್ತಿದ್ದಾರೆ. ಈ ಶ್ರಮವನ್ನ ಬಿಜೆಪಿ-ಎಡಿಎಸ್ ಮೈತ್ರಿ ರೋಣ ಕ್ಷೇತ್ರದಲ್ಲಿ ಹಾಳು ಮಾಡುವ ಎಲ್ಲ ಲಕ್ಷಣ ಗೋಚರವಾಗುತ್ತಿದೆ. 

ರೋಣದಲ್ಲಿ ಎರಡೇ ಪಕ್ಷಗಳು ಆಡಳಿತ ನಡೆಸಿವೆ. ಪ್ರಬಲರಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಚುನಾವಣಾ ಚದುರಂಗದಾಟ ಜೆಡಿಎಸ್ ನಲ್ಲಿ ನಡೆಯುತ್ತಿಲ್ಲ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಎಲ್ಲವೂ ಪ್ರಭಾವಿ ನಾಯಕರು ಮಾಜಿ ಸಚಿವರು ಆದ ಕಳಕಪ್ಪ ಬಂಡಿ ಅವರು ನಿರ್ಧರಿಸುತ್ತಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ನಿಜ ಕೂಡ ಹೌದು. ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಕಳೆದುಹೋಗಲಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಪ್ರಭಾವ ವಿಲ್ಲದಿರುವುದು ಒಂದೆಡೆಯಾದ್ರೆ, ಈಗ ಹೊಂದಾಣಿಕೆಯೂ ಜೆಡಿಎಸ್ ಅಷ್ಟೊಂದು ಪ್ರಭಾವ ಬರುತ್ತಿಲ್ಲ. ಜೆಡಿಎಸ್ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಸಧ್ಯ 
ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ವಿರೋಧಿಸಿದಂತೆ ಮತ್ತು ರಾಜ್ಯದ ಅಭಿವೃದ್ಧಿಗೆ ತೊಡಕಾಗಿರುವ ವಿಷಯಗಳನ್ನ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಆದ್ರೆ, ಅದೇ ಬೆಳವಣಿಕೆ ರೋಣ ಮತ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ನಡೆಯುತ್ತಿಲ್ಲ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿಲ್ಲ. 

ಸ್ಥಳೀಯವಾಗಿ ನೋಡುವುದಾದ್ರೆ, ಮೂರು ಪಕ್ಷಗಳು ಹೊಂದಾಣಿಕೆಯ ರಾಜಕಾರಣ ಮಾಡುತ್ತಾ ಬಂದಿವೆ ಎಂದು ಆಗಾಗ ಸಾರ್ವಜನಿಕ ವಲಯದಲ್ಲಿ ಚರ್ಚಾ ವಿಷಯವಾಗಿರುವುದಂತು‌ ಸತ್ಯ... 

ರೋಣದಲ್ಲಿ ಜೆಡಿಎಸ್ ಬೆಳೆದಿರುವುದು ಮಕ್ತುಮಸಾಬ್ ಮೊಧೋಳ್ ಅವರಿಂದಲೇ ಎಂಬುದನ್ನ ಒಪ್ಪಿಕೊಳ್ಳಲೇಬೇಕು. ಜೆಡಿಎಸ್ ಮತ್ತು ಬಿಜೆಪಿ ಜನರ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಹೋರಾಟ ಮಾಡುವುದು ಯಾವಾಗ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ...
Post a Comment

Post a Comment