ಗಜೇಂದ್ರಗಡ : (Oct_27_2026)
ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಗಜೇಂದ್ರಗಡದಲ್ಲಿ ರಾಜಕೀಯ ಚಟುಚಟಿಕೆಗಳು ಜೋರಾಗಿದೆ. ಇಷ್ಟು ದಿನ ತಣ್ಣಗಿದ್ದ ಬಿಜೆಪಿಯಲ್ಲೀಗ ಜಾತಿ ಲೆಕ್ಕಾಚಾರ ಆರಂಭವಾಗಿದೆ. ಪಶ್ಚಿಮ ಪದವಿಧರರ ಚುನಾವಣಾ ಮತದಾನಕ್ಕೂ ಮೊದಲು ನರೇಗಲ್ ನಲ್ಲಿ ಬಣಜಿಗ ಸಮಾಜವನ್ನ ಅವಹೇಳನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ವು. ಈ ಬಗ್ಗೆ ಸೋಷಿಯಲ್ ಮಿಡಿಯಾ ಮತ್ತು ಕೆಲ ಮಾಧ್ಯಮದಲ್ಲೂ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತ್ತು. ಈಗ ಗಜೇಂದ್ರಗಡದ ಬಣಜಿಕ ಸಮಾಜ ಮಾಜಿ ಸಚಿವರ ಹೇಳಿಕೆಯನ್ನ ಖಂಡಿಸಿದೆ.
ಒಂದು ಗುಂಪು ಬಿಜೆಪಿ ಮತ್ತೊಂದು ಗುಂಪು ಕಾಂಗ್ರೆಸ್ ಬೆಂಬಲವಾಗಿದ್ದು, ಬಣಜಿಗ ಸಮಾಜ ಬಹಳಷ್ಟು ಬಲಿಷ್ಟವಾಗಿದೆ. ಹಾಗೂ ಬಣಜಿಗ ಸಮಾಜದ ಮತದಾರರು ನಿರ್ಣಾಯಕವಾಗದಿದ್ದರೂ, ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಚುನಾವಣೆಗಳು ಹತ್ತಿರ ವಿದ್ದಾಗ ಇಂತಹ ಹೇಳಿಕೆಗಳು ಮಹತ್ವ ಪಡೆದುಕೊಳ್ಳುತ್ವೆ. ತಾಲೂಕಿನಲ್ಲಿ ಮಾಜಿ ಸಚಿವರ ಹೇಳಿಕೆಯನ್ನ ಸಮಾಜ ಖಂಡಿಸಿದೆ ಎಂದರೆ ಸಮಾಜದಲ್ಲಿ ಒಗ್ಗಟ್ಟು. ಒಬ್ಬರನ್ನ ಖಂಡಿಸುವುದಕ್ಕೂ ಮತ್ತು ಸಮಾಜವನ್ನ ಗುರಿಯಾಗಿಸಿ ಹೇಳಿದ ಹೇಳಿಕೆಗಳಿಗೂ ವ್ಯತ್ಯಾಸಗಳಿವೆ. ಈಗ ಮಾಜಿ ಸಚಿವರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿರಿವ ಬಣಜಿಗ ಸಮಾಜ ಬಾಂಧವರು, ಮಾಜಿ ಸಚಿವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಮಾಜಿ ಸಚಿವರಾದ ಕಳಕಪ್ಪ ಬಂಡಿ ಅವರು ಈ ಬಗ್ಗೆ ಕ್ಷಮೆಯಾಚಿಸುತ್ತಾರಾ ಇಲ್ಲ ಈ ಹೇಳಿಕೆಯನ್ನ ನಿರ್ಲಕ್ಷಿಸುತ್ತಾರಾ ಎಂಬುದನ್ನ ಸಮಯವೆ ನಿರ್ಧರಿಸಲಿದೆ.
ಇದೆಲ್ಲವನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆಯಾ ಕಾದು ನೋಡಬೇಕಿದೆ.
ಕೃಷ್ಣ ರಾಠೋಡ್
ಸಂಪಾದಕರು,
ಕಿರಾ ನ್ಯೂಸ್ ಕನ್ನಡ
ಗಜೇಂದ್ರಗಡ
ಮೊ : 8197474996



Post a Comment